ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಕ್ಕೆ ಬಾಲ ಬಿಚ್ಚಿದ್ದಾರೆ: ಪ್ರತಾಪ್ ಸಿಂಹ

Public TV
2 Min Read

– ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ಇದೆ
– ಹೆಣ್ಣುಮಕ್ಕಳ ಮೇಲೆ ಲಾಠಿ ಬೀಸಿದ ಪೊಲೀಸರು ಸಸ್ಪೆಂಡ್ ಆಗ್ಬೇಕು

ಮಂಡ್ಯ: ರಾಜ್ಯದಲ್ಲಿ ತಾಲಿಬಾನಿ ಸರ್ಕಾರ ಇದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಾರೆ. ಅದಕ್ಕಾಗಿ ಇವರು ಬಾಲ ಬಿಚ್ಚಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮದ್ದೂರಿನ (Maddur Stone Pelting) ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ತಾಲಿಬಾನ್ ಆಡಳಿತ ಮಾಡುತ್ತಿದೆ. ಮುಸಲ್ಮಾನರು ಶಾಂತಿಪ್ರಿಯರು ಅಂತಾರೆ. ಮಸೀದಿಯಲ್ಲಿ ಕಲ್ಲಿಟ್ಟುಕೊಂಡು ಹೊಡೆದಿದ್ದಾರೆ, ಇವರು ಶಾಂತಿ ಪ್ರಿಯರಾ? ನಾಗಮಂಗಲ ಆಯ್ತು, ಮದ್ದೂರಿಗೆ ಈ ಪರಿಸ್ಥಿತಿ ಬಂದಿದೆ. ಇಲ್ಲಿ ಹುಟ್ಟಿ, ಬೆಳೆದು ಗಡಿಯಾಚೆಗೆ ನಿಷ್ಠೆಯಿಟ್ಟುಕೊಂಡವರು ಕಲ್ಲು ತೂರುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ದೂರು ಘಟನೆ ನೋಡಿದ್ರೆ ರಾಜ್ಯದಲ್ಲಿ `ಮೊಘಲ್ ಪ್ರೇರಣೆಯ’ ಆಡಳಿತದಂತೆ ಭಾಸವಾಗುತ್ತಿದೆ – ಬಿವೈವಿ ಕಿಡಿ

ಉತ್ತರ ಪ್ರದೇಶ ಪೊಲೀಸರು ಗಣೇಶ ಮೆರವಣಿಗೆಗೆ ಬಂದು ಡ್ಯಾನ್ಸ್ ಮಾಡುತ್ತಾರೆ. ತಾಲಿಬಾನಿ ಮನಸ್ಥಿತಿಯ ಕಾಂಗ್ರೆಸ್ ಸರ್ಕಾರದಲ್ಲಿ ಇದು ಸಾಧ್ಯವಿಲ್ಲ. ಮಸೀದಿ ಒಳಗೆ ಕಲ್ಲು ಹೇಗೆ ಹೋಯ್ತು? ಮುಲ್ಲ ಯಾವನು? ಕಲ್ಲು ಹೊಡೆದವರು ಅರೆಸ್ಟ್ ಆಗಬೇಕು. ಹೆಣ್ಣುಮಕ್ಕಳ ಮೇಲೆ ಲಾಠಿ ಬೀಸಿದ ಪೊಲೀಸರು ಸಸ್ಪೆಂಡ್ ಆಗಬೇಕು. ಆತ್ಮರಕ್ಷಣೆಗಾಗಿ ಹಿಂದೂಗಳು ತಿರುಗಿ ಬೀಳುತ್ತಾರೆ. ನೂರಾರು ವರ್ಷ ಆಕ್ರಮಣ ನಡೆದರೂ 80% ಹಿಂದೂಗಳಿದ್ದಾರೆ. ಹಿಂದೂಗಳು ಕಲ್ಲು ಬಿಸಾಡಲ್ಲ, ಕಲ್ಲು ಬಿಸಾಡಿದ್ರೆ ಬಿಡಲ್ಲ. ಕಲ್ಲು ಬೀಸಿದ ಮಸೀದಿ ಬಾಗಿಲು ಮುಚ್ಚಿಸಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ

ಈ ಹೋರಾಟಕ್ಕೆ ನಿಖಿಲ್ ಕುಮಾರಸ್ವಾಮಿ ಸೇರಿ ಸಾಕಷ್ಟು ಬಿಜೆಪಿ-ಜೆಡಿಎಸ್ ನಾಯಕರು ಬರುತ್ತಾರೆ. ಹಿಂದೂ ಹುಲಿ ಯತ್ನಾಳ್ ಅವರನ್ನೂ ಕರೆಸೋಣ. ಹಿಂದೆ ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಲು ಮಹಿಷಾ ದಸರಾ ಮಾಡಿದ್ದರು. ಈಗ ಅದನ್ನ ತಡೆದು ನಿಲ್ಲಿಸಿದ್ದೇವೆ. ಈಗಲೂ ಹಿಂದೂಗಳ ರಕ್ಷಣೆಗೆ ನಾವು ಬಂದಿದ್ದೇವೆ. ಬಿಜೆಪಿ-ಜೆಡಿಎಸ್‌ನ ನಾಯಕರನ್ನು ಬಿಟ್ಟು ಜೂಜಾಡುವ ವ್ಯಕ್ತಿಯನ್ನು ಇಲ್ಲಿ ಗೆಲ್ಲಿಸಿದ್ದೀರಿ. ಅವರ ಕುಮ್ಮಕ್ಕಿನಿಂದ ಇಲ್ಲಿ ಕೆಲವರು ಬಾಲಬಿಚ್ಚಿದ್ದಾರೆ. ಬೇಕಿದ್ರೆ ಯೋಗಿ ಆದಿತ್ಯನಾಥ ಅವರನ್ನೂ ಕರೆಸೋಣ. ಪೊಲೀಸ್ ಇಲಾಖೆಯವರು ನಮಗೆ ಪ್ರೊಟೆಕ್ಷನ್ ಕೊಡುತ್ತಿದ್ದಾರೆ. ಅವರನ್ನ ಬೈಯಲು ಹೋಗಬೇಡಿ. ಉತ್ತರ ಪ್ರದೇಶದಲ್ಲಿ ಪೊಲೀಸರು ಗಣೇಶ ಮೆರವಣಿಗೆಯಲ್ಲಿ ಬಂದು ಡ್ಯಾನ್ಸ್ ಮಾಡ್ತಾರೆ. ಯಾಕಂದ್ರೆ ಅವರಿಗೆ ಇರೋದು ಯೋಗಿ ಆದಿತ್ಯನಾಥ್. ಆದರೆ ಇಲ್ಲಿ ಇರೋದು ತಾಲಿಬಾನ್ ಸರ್ಕಾರದ ಗೃಹಸಚಿವರು. ಹಿಂದೆ ನಾಗಮಂಗಲ ಗಲಭೆ ಆದಾಗ ಗೃಹಸಚಿವರು ಬರಲಿಲ್ಲ. ಇದು ಸಣ್ಣ ಘಟನೆ ಅಂತ ಗೃಹಸಚಿವರು ಹೇಳಿದ್ದರು. ಪೊಲೀಸರು ಭರವಸೆ ಕೊಡಿ, ಶಾಂತಿಯುತವಾಗಿ ಪ್ರತಿಭಟನೆ ಕೈಬಿಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 21 ಜನರನ್ನು ಬಂಧಿಸಲಾಗಿದೆ, ಮಸೀದಿ ಕಡೆಯಿಂದ ಕಲ್ಲು ಎಸೆದ ಬಗ್ಗೆ ಮಾಹಿತಿ ಇದೆ: ಚಲುವರಾಯಸ್ವಾಮಿ

ಬೆಳಗ್ಗೆ 5 ಗಂಟೆಯಿಂದ ರಾತ್ರಿವರೆಗೂ ಆಜಾನ್ ಕೂಗುತ್ತಾರೆ. ಆ ಕೂಗು ನಾವು ಕೇಳಿಸಿಕೊಳ್ಳಲ್ವಾ? ಮಸೀದಿ ಬಳಿ ಡಿಜೆ ಹಾಕಬೇಡಿ ಅಂದ್ರೆ ಯಾವ ನ್ಯಾಯ? ಬಂಧಿತ ಹಿಂದೂ ಯುವಕರನ್ನು ಬಿಡುಗಡೆ ಮಾಡಬೇಕು. ಗಣೇಶ ಕೂರಿಸಲು ಅನುಮತಿ ನೀಡಲು ದುಡ್ಡು ಪಡೆದ ಅಧಿಕಾರಿಗಳು ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು: ಅಶೋಕ್ ಕಿಡಿ

Share This Article