ನಿಯಂತ್ರಣ ತಪ್ಪಿ ಕೆರೆಗೆ ಧುಮುಕಿದ ಕಾರು- ಓರ್ವ ಪಾರು, ಇಬ್ಬರು ನೀರುಪಾಲು

By
1 Min Read

ತುಮಕೂರು: ನಿಯಂತ್ರಣ ತಪ್ಪಿ ಕಾರು (Car) ಕೆರೆಗೆ (Lake) ಧುಮುಕಿದ ಪರಿಣಾಮ ಕಾರಿನಲ್ಲಿದ್ದ ಮೂವರಲ್ಲಿ ಓರ್ವ ಪಾರಾಗಿದ್ದು, ಇಬ್ಬರು ನೀರುಪಾಲಾದ ಘಟನೆ ತುಮಕೂರಿನ (Tumakuru) ಶಿರಾ (Shira) ತಾಲೂಕಿನಲ್ಲಿ ನಡೆದಿದೆ.

ಬುಕ್ಕಾಪಟ್ಟಣ ಸಮೀಪದ ರಾಮಲಿಂಗಾಪುರ ಬಳಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಪ್ರವೀಣ್ ಎಂಬವರು ಘಟನೆಯಲ್ಲಿ ಪಾರಾಗಿದ್ದಾರೆ. ಇನ್ನುಳಿದ ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ದೊಡ್ಡಣ್ಣ, ಯಮುನಾ ಎಂಬವರಿಗಾಗಿ ಶೋಧ ಕಾರ್ಯ ಮುಂದುವರಿಯುತ್ತಿದ್ದು, ಯಾವ ಮೂಲದವರು ಎನ್ನುವ ಮಾಹಿತಿ ದೊರೆತಿಲ್ಲ. ಇದನ್ನೂ ಓದಿ: ಚಾಲಕನಿಗೆ ಹೃದಯ ಸ್ತಂಭನ- ಸಾಯೋ ಮೊದ್ಲು 48 ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಕಾರನ್ನು ನೀರಿನಿಂದ ಮೇಲಕ್ಕೆತ್ತಲು ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರಿದಿದೆ. ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಿವಿಯಲ್ಲಿ ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆಯಲ್ಲಿ ಅಕ್ರಮ – 13 ಮಂದಿ ಅರೆಸ್ಟ್

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್