ಹಸೆಮಣೆ ಏರಿದ ದಿನವೇ ಪರೀಕ್ಷೆಗೆ ಹಾಜರಾದ ನವವಧು

Public TV
1 Min Read

ಶಿವಮೊಗ್ಗ: ಹೊಸ ಜೀವನಕ್ಕೆ ಕಾಲಿಟ್ಟ ದಿನವೇ ನವವಧುವೊಬ್ಬರು (Bride) ಪರೀಕ್ಷೆಗೆ (Exam) ಹಾಜರಾದ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ.

ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಚೆನ್ನೈ ಮೂಲದ ಫ್ರಾನ್ಸಿಸ್‌ಗೆ ಕಳೆದ ಎರಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ (Social Media) ಪರಿಚಯವಾಗಿತ್ತು. ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಪ್ರೇಮಾಂಕುರವಾಗಿತ್ತು. ಹೀಗಾಗಿ ಸತ್ಯವತಿ ಹಾಗೂ ಫ್ರಾನ್ಸಿಸ್ ಹಿರಿಯರನ್ನು ಒಪ್ಪಿಸಿ ಭಾನುವಾರ ಮನೆಯಲ್ಲಿಯೇ ಸರಳವಾಗಿ ವಿವಾಹವಾದರು. ಇದನ್ನೂ ಓದಿ: ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ

ಆದರೆ ಸತ್ಯವತಿ ಪದವಿ ಕಾಲೇಜುವೊಂದರಲ್ಲಿ ಅಂತಿಮ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಇಂದು ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಇತ್ತು. ಹೀಗಾಗಿ ಭಾನುವಾರ ಮುಂಜಾನೆ ತಾಳಿ ಕಟ್ಟಿಸಿಕೊಂಡ ಸತ್ಯವತಿಯನ್ನು ವರ ಫ್ರಾನ್ಸಿಸ್ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋದರು. ಪರೀಕ್ಷೆ ನಂತರ ನವವಧು ಮತ್ತೆ ಮದುವೆ ಮಂಟಪಕ್ಕೆ ತೆರಳಲಿದ್ದು, ಮುಂದಿನ ಧಾರ್ಮಿಕ ವಿಧಿವಿಧಾನ ನೆರವೇರಲಿದೆ. ಇದನ್ನೂ ಓದಿ: ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್