ಬೆಂಗಳೂರು ಮಳೆಗೆ ಎರಡನೇ ಬಲಿ – ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

Public TV
1 Min Read

ಬೆಂಗಳೂರು: ಭಾನುವಾರ ನಗರದಲ್ಲಿ (Bengaluru) ಸುರಿದ ಮಹಾಮಳೆಗೆ (Rain) ಯುವಕನೋರ್ವ ರಾಜಕಾಲುವೆಯಲ್ಲಿ (Raja Kaluve) ಕೊಚ್ಚಿ ಹೋದ ಘಟನೆ ಕೆಪಿ ಅಗ್ರಹಾರದ (KP Agrahara) ಬಳಿ ನಡೆದಿದೆ.

ಕೊಚ್ಚಿ ಹೋಗಿದ್ದ ಯುವಕನನ್ನು ಲೋಕೇಶ್ (27) ಎಂದು ಗುರುತಿಸಲಾಗಿದೆ. ಯುವಕನ ಮೃತದೇಹ ಬ್ಯಾಟರಾಯನಪುರದ (Byatarayanapura) ರಾಜಕಾಲುವೆ ಬಳಿ ಪತ್ತೆಯಾಗಿದೆ. ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರದ ಕೆಆರ್ ಸರ್ಕಲ್‍ನ ಅಂಡರ್ ಪಾಸ್‍ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಟೆಕ್ಕಿ ಭಾನುರೇಖಾ ಎಂಬುವವರು ಸಾವನ್ನಪ್ಪಿದ್ದರು. ಈಗ ಯುವಕನ ಸಾವು ಮಳೆಯಿಂದ ಆದ ಎರಡನೇ ದುರ್ಘಟನೆ ಆಗಿದೆ. ಇದನ್ನೂ ಓದಿ: ಮಳೆ ಆರ್ಭಟಕ್ಕೆ ಮನೆಗೆ ನೀರು ನುಗ್ಗಿ ಜಗ್ಗೇಶ್ ಕಾರು ಮುಳುಗಡೆ

Share This Article