ಪ್ರಭಾಸ್ ನಟನೆಯ ‘ಪ್ರೊಜೆಕ್ಟ್ ಕೆ’ ಚಿತ್ರದಲ್ಲಿದೆ ಮಹಾರಹಸ್ಯ

Public TV
2 Min Read

ಕೊನೆಗೂ ಮಹಾ ರಹಸ್ಯವೊಂದು ಹೊರ ಬಿದ್ದಿದೆ. ಇಷ್ಟು ದಿನ ಪ್ರಭಾಸ್ (Prabhas) ಪ್ರೊಜೆಕ್ಟ್ ಕೆ  (Project K)ಸಿನಿಮಾದ ಯಾವುದೇ ಗುಟ್ಟು ಗೊತ್ತಾಗಿರಲಿಲ್ಲ. ಎಲ್ಲರೂ ಸೈಲೆಂಟ್ ಆಗಿದ್ದರು. ಇದೀಗ ಇದರ ನಿರ್ಮಾಪಕನೇ ಕತೆ ಹಾಗೂ ಪ್ರಭಾಸ್ ಪಾತ್ರದ ಸತ್ಯವನ್ನು ಹರವಿಟ್ಟಿದ್ದಾನೆ. ಮೊಟ್ಟ ಮೊದಲ ಬಾರಿಗೆ ಪ್ರೊಜೆಕ್ಟ್ ಕೆ ಚಿತ್ರದ ದಿವ್ಯ ಕತೆ ಅನಾವರಣಗೊಂಡಿದೆ. ಹಾಗಿದ್ದರೆ ಇದರಲ್ಲಿ ಪ್ರಭಾಸ್ ಅದ್ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ, ಇದರ ಕಥಾ ಹಂದರ ಏನು, ಐದು ನೂರು ಕೋಟಿ ಬಜೆಟ್ ಹೇಗೆ ಖರ್ಚಾಗಲಿದೆ? ಇಂತಹ ಹಲವು ಅನುಮಾನಗಳು ಪ್ರೇಕ್ಷಕರಲ್ಲಿ ಮೂಡಿವೆ,

ಪ್ರೊಜೆಕ್ಟ್ ಕೆ ಸಿನಿಮಾ ಹೆಸರು ಮೊದಲು ಹೊರಬಿದ್ದಾಗ ಎಲ್ಲರ ಕಿವಿ ನೆಟ್ಟಗಾಗಿದ್ದವು. ಸೈನ್ಸ್ ಫಿಕ್ಷನ್ ಕತೆ ಎನ್ನುವುದನ್ನು ಮಾತ್ರ ನಿರ್ದೇಶಕ ಅಶ್ವಿನಿ ದತ್ತಾ (Ashwini Dutta) ಹೇಳಿದ್ದರು. ಐದು ನೂರು ಕೋಟಿ ಬಜೆಟ್ ಎನ್ನುವುದು ಹೈಲೈಟ್ ಆಗಿತ್ತು. ಅದು ಬಿಟ್ಟರೆ ಅದೊಂದು ಚಿಕ್ಕ ಮೇಕಿಂಗ್ ವಿಶುವಲ್ ತೋರಿಸಿದ್ದರು. ಆಗಲೂ ಈ ಸಿನಿಮಾದ ಕ್ಯಾನ್ವಾಸ್ ಅರ್ಥವಾಗಿರಲಿಲ್ಲ. ಯಾಕೆಂದರೆ ನಿರ್ದೇಶಕ ಅಶ್ವಿನಿ ದತ್ತಾ ಈ ಹಿಂದೆ ಮಹಾನಟಿ ನಿರ್ದೇಶಿಸಿದ್ದರು. ಅದಕ್ಕೂ ಇದಕ್ಕೂ ಹೋಲಿಕೆ ಸಾಧ್ಯ ಇರಲಿಲ್ಲ. ಈಗ ನಿರ್ಮಾಪಕರು ರಹಸ್ಯ ಬಿಚ್ಚಿಟ್ಟಿದ್ದಾರೆ. ಇದರಲ್ಲಿ ಪ್ರಭಾಸ್ ಆಧುನಿಕ ವಿಷ್ಣು ಅವತಾರದ ಪಾತ್ರದಲ್ಲಿ ಮೆರವಣಿಗೆ ಹೊರಡಲಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಹುಡುಗಿಗೆ ಹೊಡೆದ ಲವರ್‌ಗೆ ಜಾಡಿಸಿದ ನಟ ನಾಗಶೌರ್ಯ

ಇದೊಂದು ರೀತಿಯಲ್ಲಿ ಕಲಿಯುಗದ ವಿಷ್ಣು ಅವತಾರ ಎಂದವರು ಇದ್ದಾರೆ. ದುಷ್ಟ ಶಕ್ತಿಗಳ ದಮನಕ್ಕೆ ಮಹಾ ವಿಷ್ಣು ನಾನಾ ಅವತಾರ ಎತ್ತಿದ್ದು ಎಲ್ಲರಿಗೂ ಗೊತ್ತಿದೆ. ನಮ್ಮ ಪುರಾಣದಲ್ಲಿ ಇದಕ್ಕೆ ಉಲ್ಲೇಖ ಇದೆ. ಈಗ ಅದೇ ಮಾದರಿಯಲ್ಲಿ ಈಗಿನ ಕಾಲದ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಭಾಸ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಂತ ಬರೀ ಹೊಡಿ ಬಡಿ ದೃಶ್ಯಗಳೇ ಇರುತ್ತವೆ ಎಂದು ತಿಳಿಯಬೇಡಿ. ಮನುಷ್ಯನ ಸಂಬಂಧ, ಭಾವನೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ ಚಿತ್ರಕತೆ ಹೆಣೆದಿದ್ದಾರಂತೆ ಅಶ್ವಿನಿ ದತ್ತಾ.

ಭಾರತೀಯ ಚಿತ್ರರಂಗ ಹಿಂದೆಂದೂ ಕಂಡಿರದ ದಿವ್ಯ ಲೋಕದ ಅನಾವರಣ ಮಾಡಲಿದ್ದಾರೆ ನಿರ್ದೇಶಕರು. ಗ್ರಾಫಿಕ್ಸ್, ಮೋಶನ್ ಗ್ರಾಫಿಕ್ಸ್ ಹಾಗೂ ಅದ್ಭುತ ಸೆಟ್‌ಗಳನ್ನು ಇದಕ್ಕಾಗಿ ನಿರ್ಮಿಸಿದ್ದಾರೆ. ಈಗಾಗಲೇ ಶೇಕಡಾ ಎಪ್ಪತ್ತರಷ್ಟು ಶೂಟಿಂಗ್ ಮುಗಿದಿದೆ. ಇನ್ನು ಕೆಲವು ತಿಂಗಳಲ್ಲಿ ಎಲ್ಲವೂ ಫೈನಲ್ ಫೈನಲ್. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ (Deepika Padukone), ಅಮಿತಾಭ್ ಬಚ್ಚನ್ (Amitabh Bachchan) ಹಾಗೂ ದಿಶಾ ಪಠಾಣಿ ಕೂಡ ಇದ್ದಾರೆ. ಮುಂದಿನ ವರ್ಷ ಜನವರಿ ಹನ್ನೆರಡರಂದು ವಿಶ್ವದ ತುಂಬಾ ಪ್ರೊಜೆಕ್ಟ್ ಕೆ ದಿಬ್ಬಣ ಹೊರಡಲಿದೆ.

Share This Article
Leave a Comment

Leave a Reply

Your email address will not be published. Required fields are marked *