The Ashes | ಎರಡೇ ದಿನಕ್ಕೆ ಮುಗಿದ ಪಂದ್ಯ – ಆಸೀಸ್‌ಗೆ 8 ವಿಕೆಟ್‌ಗಳ ಜಯ, 1-0 ಸರಣಿ ಮುನ್ನಡೆ

2 Min Read

ಪರ್ತ್‌: ಟ್ರಾವಿಸ್‌ ಹೆಡ್‌ (Travis Head) ಅಮೋಘ ಶತಕದ ನೆರವಿನಿಂದ ಆ್ಯಶಸ್ ಸರಣಿಯ (The Ashes) ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಹೈವೋಲ್ಟೇಜ್‌ ಟೆಸ್ಟ್‌ ಸರಣಿಯಲ್ಲಿ ಆಸೀಸ್‌ (Australia) 1-0 ಮುನ್ನಡೆ ಸಾಧಿಸಿದೆ.

ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. 40 ರನ್‌ಗಳ ಮುನ್ನಡೆಯೊಂದಿಗೆ 2ನೇ ದಿನ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ (England) ಅಗ್ರ ಬ್ಯಾಟರ್‌ಗಳ ವೈಫಲ್ಯದಿಂದಾಗಿ 164 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಆಸೀಸ್‌ಗೆ 205 ರನ್‌ಗಳ ಗುರಿ ನೀಡಿತು. ಇದನ್ನೂ ಓದಿ: IPL retentions 2026: ಯಾವ್ಯಾವ ತಂಡದಿಂದ ಯಾವ ಆಟಗಾರರು ಔಟ್‌ – ಇಲ್ಲಿದೆ ಫುಲ್‌ ಲಿಸ್ಟ್‌

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ಲಯ ತಪ್ಪಿದ್ದ ಆಸೀಸ್‌ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಟ್ರಾವಿಸ್‌ ಹೆಡ್‌ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್‌ ನಡೆಸಿದರು. ಆಂಗ್ಲರ ಬೆವರಿಳಿಸಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಹೆಡ್‌ 83 ಎಸೆತಗಳಲ್ಲಿ 123 ರನ್‌ (4 ಸಿಕ್ಸರ್‌, 16 ಬೌಂಡರಿ) ಚಚ್ಚಿದರು. ಇದರೊಂಗೆ ಮಾರ್ನಸ್‌ ಲಾಬುಶೇನ್‌ 51 ರನ್‌ (49 ಎಸೆತ, 1 ಸಿಕ್ಸರ್‌, 6 ಬೌಂಡರಿ) ಬಾರಿಸುವ ಮೂಲಕ ಗೆಲುವಿನ ದಡ ಸೇರಿಸಿದ್ರು. ಇನ್ನೂ ಆಸೀಸ್‌ ಪರ ಜೇಕ್ ವೆದರಾಲ್ಡ್ 23 ರನ್‌ ಗಳಿಸಿದ್ರೆ, ನಾಯಕ ಸ್ಟೀವ್‌ ಸ್ಮಿತ್‌ 2 ರನ್‌ ಗಳಿಸಿದ್ರು. ಇದನ್ನೂ ಓದಿ: ರಂಗೇರಿಸಿದ ಆ್ಯಶಸ್; ಮೊದಲ ದಿನವೇ 19 ವಿಕೆಟ್‌ ಪತನ – ಆಸೀಸ್‌ಗೆ ʻಮಾಸ್ಟರ್‌ ಸ್ಟೋಕ್ಸ್‌ʼ

ಮಿಚೆಲ್‌ ಸ್ಟಾರ್ಕ್‌ ಪಂದ್ಯ ಶ್ರೇಷ್ಠ
2 ಪಂದ್ಯಗಳಲ್ಲಿ ಮಾರಕ ದಾಳಿ ನಡೆಸಿ ಆಂಗ್ಲರ ಗೆಲುವಿಗೆ ತಡೆಯಾದ ಮಿಚೆಲ್‌ ಸ್ಟಾರ್ಕ್‌ 10 ವಿಕೆಟ್‌ಗಳನ್ನ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ಮೊದಲ ಇನ್ನಿಂಗ್ಸ್‌ನಲ್ಲಿ 12.5 ಓವರ್‌ಗಳಲ್ಲಿ 58 ರನ್‌ ಬಿಟ್ಟುಕೊಟ್ಟು 7 ವಿಕೆಟ್‌ ಕಿತ್ತಿದ್ದ ಸ್ಟಾರ್ಕ್‌, 2ನೇ ಇನ್ನಿಂಗ್ಸ್‌ನಲ್ಲಿ 12 ಓವರ್‌ಗಳಲ್ಲಿ 55 ರನ್‌ ಕೊಟ್ಟು 3 ವಿಕೆಟ್‌ ಕಿತ್ತರು. ಇದನ್ನೂ ಓದಿ: ಜಡೇಜಾ ಕೈಬಿಟ್ಟು ಸ್ಯಾಮ್ಸನ್‌ ಸೇರಿಸಿಕೊಂಡ ಸಿಎಸ್‌ಕೆ; ಯಾವ್ಯಾವ ತಂಡಕ್ಕೆ ಯಾವ ಆಟಗಾರರು ಟ್ರೇಡ್‌- ಇಲ್ಲಿದೆ ಪಟ್ಟಿ

Share This Article