ಐಪಿಎಲ್‍ನಿಂದ ಔಟ್ ಆಗಿದ್ದ ಅಂಪೈರ್ ಅಸಾದ್ ರೌಫ್ ಇದೀಗ ಪಾಕ್‍ನಲ್ಲಿ ಚಪ್ಪಲಿ ವ್ಯಾಪಾರಿ

Public TV
2 Min Read

ಇಸ್ಲಾಮಾಬಾದ್: ಐಸಿಸಿಯ ಎಲೈಟ್ ಪ್ಯಾನೆಲ್ ಅಂಪೈರ್ ಆಗಿ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಪಾಕಿಸ್ತಾನದ ಅಸಾದ್ ರೌಫ್ ಇದೀಗ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಚಪ್ಪಲಿ, ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ರೌಫ್ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರ್ ಅಲ್ಲದೇ ಐಪಿಎಲ್‍ನಲ್ಲೂ ಕೂಡ ಅಂಪೈರ್ ಆಗಿ ಕೆಲಸ ನಿರ್ವಹಿಸಿದ್ದರು. ಆದರೆ ಸುಮ್ಮನೆ ಅಂಪೈರಿಂಗ್ ಮಾಡುತ್ತಿದ್ದರೇ ಅಸಾದ್ ರೌಫ್‍ಗೆ ಇದೀಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ರೌಫ್ 2013ರ ಐಪಿಎಲ್‍ನಲ್ಲಿ ಬುಕ್ಕಿಗಳೊಂದಿಗೆ ಸಂಪರ್ಕಿಸಿ ದುಬಾರಿ ಉಡುಗೊರೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ ವಿಚಾರಣೆ ನಡೆಸಿದ ಐಸಿಸಿಯ ಶಿಸ್ತು ಸಮಿತಿ ಆರೋಪ ಸಾಭೀತಾದ ಬಳಿಕ ರೌಫ್‍ರನ್ನು 2016ರ ನಂತರ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರಿಂಗ್‍ಗೆ ನಿಷೇಧ ಹೇರಿತ್ತು. ಈ ಮೂಲಕ ಅಸಾದ್ ರೌಫ್ ಅಂಪೈರ್ ವೃತ್ತಿ ಅಂತ್ಯ ಕಂಡಿತು. ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!

ಈ ಮೊದಲು ಮುಂಬೈ ಮೂಲದ ಮಾಡೆಲ್‍ಗೆ ಲೈಗಿಂಕ ಕಿರುಕುಳ ನೀಡಿ ಮದುವೆ ಆಗುವುದಾಗಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೂಡ ರೌಫ್ ಮೇಲೆ ಕೇಳಿಬಂದಿತ್ತು. ರೌಫ್‌ ಈ ಆರೋಪ ಸುಳ್ಳು ಎಂದು ಅಲ್ಲಗಳೆದಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

ಅಸಾದ್ ರೌಫ್ 2000 ರಿಂದ 2013 ರವರೆಗೆ 49 ಟೆಸ್ಟ್, 98 ಏಕದಿನ ಪಂದ್ಯ ಮತ್ತು 23 ಟಿ20 ಪಂದ್ಯಗಳು ಸೇರಿ ಒಟ್ಟು 170 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅಂಪೈರ್ ವೃತ್ತಿ ತೊರೆದು ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಅಂಗಡಿಯನ್ನು ತೆರೆದು ಬಟ್ಟೆ, ಚಪ್ಪಲಿ, ಶೂ ವ್ಯಾಪಾರ ಮಾಡುತ್ತಿದ್ದಾರೆ.

ಲಾಹೋರ್‌ನಲ್ಲಿ ಲಾಂಡಾ ಬಜಾರ್ ಕಡಿಮೆ ಬೆಲೆಗೆ ಬಟ್ಟೆ, ಚಪ್ಪಲಿಗಳು ಮತ್ತು ಇತರ ಸರಕುಗಳು ಸಿಗುವ ಸ್ಥಳವಾಗಿದೆ. ಲಾಂಡಾ ಬಜಾರ್‌ನಲ್ಲಿರುವ ಕೆಲವು ಅಂಗಡಿಗಳು ಸೆಕೆಂಡ್ ಹ್ಯಾಂಡ್ ಸರಕುಗಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ. ಇದೀಗ ಈ ಸ್ಥಲದಲ್ಲಿ ಅಸಾದ್ ರೌಫ್ ಬಟ್ಟೆ, ಚಪ್ಪಲಿ, ಶೂಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *