ಆ ನಟಿ ತನ್ನದೇ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದಳು : ಪ್ರಿಯಕರ ಆರೋಪ

Public TV
1 Min Read

ಕೆ ತನ್ನದೇ ಅಶ್ಲೀಲ ವಿಡಿಯೋಗಳನ್ನು (Porn Video) ನಾನಾ ಸೆಟ್ ಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಳು. ಹಾಗಾಗಿ ಆಕೆಯಿಂದ ದೂರವಾದೆ ಎಂದು ತಮಿಳು (Tamil) ನಟಿ ಲುಬ್ನಾ ಆಮೀರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ ಆಕೆಯ ಮಾಜಿ ಪ್ರಿಯಕರ ಮಸಿಉಲ್ಲ ಖಾನ್ (Masiullah Khan). ಕೆಕ್ಕರಾನ್ ಮೀಕ್ಕರಾನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಲುಬ್ನಾ (Lubna Aamir), ಮೊನ್ನೆಯಷ್ಟೇ ತನ್ನ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದರು. ಬಂಧಿತನಾಗಿದ್ದ ಮಸಿಉಲ್ಲ, ಇದೀಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾನೆ.

ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಐಟಿ ಉದ್ಯೋಗಿ ಮಸಿಉಲ್ಲ ಖಾನ್, ನಟಿ ಲುಬ್ನಾಗೆ ಪರಿಚಯವಾಗಿದ್ದ. ನಂತರದ ದಿನಗಳಲ್ಲಿ ಪರಿಚಯವು ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ ಡೇಟ್ ಕೂಡ ಮಾಡುತ್ತಿದ್ದರು. ನಂತರ ಮಸಿಉಲ್ಲಗೆ ಮದುವೆ ಆಗಿರುವ ವಿಚಾರ ಗೊತ್ತಾಗಿ, ಅವನಿಂದ ದೂರವಾಗಿದ್ದಳು. ಈ ಸಮಯದಲ್ಲಿ ಆತನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋಗಳನ್ನು ತೋರಿಸಿ ಅವನು ಬೆದರಿಸುತ್ತಿದ್ದಾನೆ ಎಂದು ದೂರು ನೀಡಿದ್ದಳು.

ಮಸಿಉಲ್ಲ ಖಾನ್ ಜೈಲಿನಿಂದ ಆಚೆ ಬಂದ ನಂತರ ಮತ್ತೆ ತನಗೆ ತೊಂದರೆ ನೀಡುತ್ತಿದ್ದಾನೆ ಎಂದು ನಟಿ ಆರೋಪ ಮಾಡಿದ್ದಾಳೆ. ಅವನಷ್ಟೇ ಅಲ್ಲ, ಕೊಟ್ಟಿರುವ ದೂರನ್ನು ವಾಪಸ್ಸು ಪಡೆದುಕೊಳ್ಳುವಂತೆ ಆತನ ಪತ್ನಿಯೂ ಬೆದರಿಕೆ ಹಾಕುತ್ತಿದ್ದಾಳೆ ಎಂದು ಲುಬ್ನಾ ಮತ್ತೊಂದು ದೂರನ್ನು ದಾಖಲಿಸಿದ್ದಾಳೆ. ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ, ಕಮಿಷನರಿಗೆ ದೂರು ನೀಡಿದ್ದಾಳೆ ನಟಿ. ಇದನ್ನೂ ಓದಿ:Exclusive- ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಹೇಗೆ?

ಮಸಿಉಲ್ಲ ಕೂಡ ಆಕೆಯ ವಿರುದ್ಧ ಪ್ರತಿ ದೂರು ನೀಡಿದ್ದು, ಪೆರವಳ್ಳೂರು, ವೆಲ್ಲೂರು ಮತ್ತು ವಿನಿಯಂಪಾಡಿ ಪೊಲೀಸ್ ಠಾಣೆಯಲ್ಲಿ ಸರಣಿಯ ದೂರುಗಳನ್ನು ಸಲ್ಲಿಸಿದ್ದಾನೆ. ಆಕೆ ತನ್ನದೇ ಅಶ್ಲೀಲ ಫೋಟೋ ಹಾಗೂ ವಿಡಿಯೋವನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುತ್ತಿದ್ದಳು. ಹಾಗೆ ಮಾಡಿ ದುಡ್ಡು ಮಾಡುತ್ತಿದ್ದಳು. ಅದು ಗೊತ್ತಾಗಿ, ಆಕೆಯಿಂದ ನಾನು ದೂರ ಸರಿದೆ ಎಂದು ಹೇಳಿಕೊಂಡಿದ್ದಾರೆ.

Share This Article