ಕಾರವಾರ | ಮೆಡಿಕಲ್‌ ಟೆಸ್ಟ್‌ಗೆ ಕರೆತಂದಿದ್ದ ಆರೋಪಿ ಪರಾರಿ

Public TV
1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದ ವ್ಯಕ್ತಿಯು ಕುಮಟಾ ಪೊಲೀಸರು ನ್ಯಾಯಾಲಯಕ್ಕೆ ಹಾಜುರುಪಡಿಸಲು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವೇಳೆ ಪೊಲೀಸರನ್ನು ದೂಡಿ ಪರಾರಿಯಾಗಿದ್ದಾನೆ.

ಅಂಗಡಿಯೊಂದರ ಎಕ್ಸಿಟ್ ಬ್ಯಾಟರಿ ಕಳ್ಳತನ ಹಾಗೂ ಕಾರುಗಳ ಕಳ್ಳತನದಲ್ಲಿ ಆರೋಪಿಯಾಗಿರುವ ಭಟ್ಕಳದ ಫಾಸಾನ್ ಪರಾರಿಯಾದವನಾಗಿದ್ದು, ಹಲವು ಕಳ್ಳತನ ಪ್ರಕರಣದಲ್ಲಿ ಈತನನ್ನು ಬಂಧಿಸಿ ಕುಮಟಾ ಪೊಲೀಸರು ಭಟ್ಕಳದಿಂದ ಕುಮಟಾಕ್ಕೆ ವಿಚಾರಣೆಗೆ ಕರೆತಂದಿದ್ದರು.

ನ್ಯಾಯಾಲಯಕ್ಕೆ ಹಾಜುರುಪಡಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸುವ ಸಲವಾಗಿ ಈತನ ವೈದ್ಯಕೀಯ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈವೇಳೆ ಇದನ್ನ ಅವಕಾಶ ಮಾಡಿಕೊಂಡ ಫಾಸಾನ್ ಪೂಲೀಸರನ್ನು ದೂಡಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈತನ ಹುಡುಕಾಟ ನಡೆಸುತಿದ್ದಾರೆ.

ಇನ್ನು ಈತ ಮಧ್ಯಮ ಗಾತ್ರದ ಗಡ್ಡದಾರಿ ವ್ಯಕ್ತಿಯಾಗಿದ್ದು 5.4 ಅಡಿ ಎತ್ತರವಿದ್ದು ತಪ್ಪಿಸಿಕೊಳ್ಳುವಾಗ ಕಪ್ಪು ಅಂಗಿ ಹಾಕಿಕೊಂಡಿದ್ದನು.ಸದ್ಯ ಈತನ ಹುಡುಕಾಟ ನಡೆಯುತಿದ್ದಾರೆ.

Share This Article