ನಡು ರಸ್ತೆಯಲ್ಲಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

By
1 Min Read

ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ (Murder) ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ಚಿಂತಾಮಣಿ (Chintamani) ನಗರದ ಟಿಪ್ಪು ಬಡಾವಣೆಯ ಅಂಗಡಿ ಮುಂದೆ ನಡೆದಿದೆ.

ಜಾಬೀರ್ ಪಾಷ ಅಲಿಯಾಸ್ ನೇಪಾಳ್ (26) ಕೊಲೆಯಾದ ವ್ಯಕ್ತಿ. ಆರೋಪಿ ಮುಕ್ತಿಯಾರ್ ಪಾಷಾ ಮತ್ತು ಜಾಬೀರ್ ನಡುವೆ ಯಾವುದೋ ವೈಯಕ್ತಿಕ ದ್ವೇಷ ಇತ್ತು. ಪರಿಣಾಮ ಆತ ಮಧ್ಯರಾತ್ರಿ ನಡು ರಸ್ತೆಯಲ್ಲಿ ಜಾಬೀರ್‌ನನ್ನು ದಾರುಣವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ:ನಿರ್ಮಲಾ ಸೀತಾರಾಮನ್‌ ಪಿಎ ಹೆಸರು ಹೇಳಿ ಧೋನಿ ಮ್ಯಾನೇಜರ್‌ಗೆ ಲಕ್ಷ ಲಕ್ಷ ವಂಚನೆ

ಆರೋಪಿ ಕೊಲೆ ಮಾಡಿದ ಬಳಿಕ ಮಧ್ಯರಾತ್ರಿಯೇ ಪೊಲೀಸ್ ಠಾಣೆಗೆ ಹೋಗಿ ತಾನು ಕೊಲೆ ಮಾಡಿರುವುದಾಗಿ ಹೇಳಿ ಶರಣಾಗಿದ್ದಾನೆ. ಘಟನೆ ಕುರಿತು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್‌ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್‌ ನೋಟಿಸ್‌

Share This Article