ದೆಹಲಿ ಡಾಕ್ಟರ್‌ ಹತ್ಯೆ ಕೇಸ್‌ – ಚಿಕಿತ್ಸೆಗೆ ಹೆಚ್ಚಿನ ಬಿಲ್‌ ಮಾಡಿದ್ದಕ್ಕೆ ಕೊಲೆ ಮಾಡ್ದೆ ಎಂದ ಅಪ್ರಾಪ್ತ!

Public TV
1 Min Read

– ಅಂತೂ 2024ರಲ್ಲಿ ಮರ್ಡರ್‌ ಮಾಡ್ದೆ ಅಂತ ಪೋಸ್ಟ್‌!

ನವದೆಹಲಿ: ಖಾಸಗಿ ಆಸ್ಪತ್ರೆಯಲ್ಲಿ 55 ವರ್ಷದ ವೈದ್ಯರನ್ನು ಹತ್ಯೆಗೈದ ಆರೋಪದ ಮೇಲೆ 17 ವರ್ಷದ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಚಿಕಿತ್ಸೆಗೆ ಹೆಚ್ಚಿನ ಹಣ ಕೇಳಿದ್ದಕ್ಕೆ ಗುಂಡು ಹಾರಿಸಿ ವೈದ್ಯರನ್ನು ಹತ್ಯೆ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹತ್ಯೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಗನ್‌ ಹಿಡಿದುಕೊಂಡು ಫೋಟೋ ಹಂಚಿಕೊಂಡಿದ್ದ. ಅಂತಿಮವಾಗಿ 2024ರಲ್ಲಿ ಮರ್ಡರ್‌ ಮಾಡ್ದೆ ಎಂದು ಬರೆದುಕೊಂಡಿದ್ದ. ಇದನ್ನೂ ಓದಿ: Delhi | ಚಿಕಿತ್ಸೆಗೆ ಬಂದು ವೈದ್ಯನ ಗುಂಡಿಕ್ಕಿ ಹತ್ಯೆಗೈದ ಅಪ್ರಾಪ್ತರು

ಬಂಧಿತ ಅಪ್ರಾಪ್ತ, ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದ ನಿಮಾ ಆಸ್ಪತ್ರೆಗೆ ಬುಧವಾರ ತಡರಾತ್ರಿ ಅಪ್ರಾಪ್ತನೊಬ್ಬ ಚಿಕಿತ್ಸೆಗಾಗಿ ಸ್ನೇಹಿತನೊಂದಿಗೆ ಬಂದಿದ್ದ. ಚಿಕಿತ್ಸೆ ಬಳಿಕ ಡಾ.ಜಾವೇದ್ ಅಖ್ತರ್ ಅವರಿಗೆ ಗುಂಡಿಕ್ಕಿ ಹತ್ಯೆಗೈದಿದ್ದ.

ವೈದ್ಯರನ್ನು ಹತ್ಯೆಗೈದ ಬಾಲಕ, ತನ್ನ ಗಾಯಗೊಂಡ ಕಾಲ್ಬೆರಳಿಗೆ ಡ್ರೆಸ್ಸಿಂಗ್ ಮಾಡಿಸಿಕೊಂಡಿದ್ದ. ಬಳಿಕ ಪ್ರಿಸ್ಕ್ರಿಪ್ಷನ್ ಬೇಕು ಎಂದು ಕೇಳಿದ್ದ. ಡಾ.ಅಖ್ತರ್ ಕ್ಯಾಬಿನ್‌ಗೆ ತೆರಳುತ್ತಿದ್ದಂತೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದ.

ಕೃತ್ಯಕ್ಕೆ ಬಳಸಿದ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನರ್ಸಿಂಗ್ ಹೋಂನ ಮಹಿಳಾ ನರ್ಸ್ ಮತ್ತು ಆಕೆಯ ಪತಿಯನ್ನು ಸಹ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ಗುಂಡಿನ ಚಕಮಕಿಯಲ್ಲಿ ಮೂವರು ಸಾವು, 20 ಮಂದಿಗೆ ಗಾಯ

Share This Article