ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷದಲ್ಲಿ ದೊಡ್ಡಣ್ಣ ಅಮೆರಿಕ (America) ಎಂಟ್ರಿ ಬಳಿಕ ಜಗತ್ತಿನಲ್ಲೆಡೆ ಮೂರನೇ ಮಹಾಯುದ್ಧದ ಭೀತಿ ಶುರುವಾಗಿತ್ತು. ಆದರೆ 12 ದಿನಗಳ ಬಳಿಕ ಇಂದು ಮೂರು ದೇಶಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಹೌದು, ಮಧ್ಯಪ್ರಾಚ್ಯ ದೇಶಗಳ ಈ ಸಂಘರ್ಷ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವ ಭೀತಿ ಜಗತ್ತಿನಲ್ಲೆಡೆ ಎದುರಾಗಿತ್ತು. ಇರಾನ್‌ನ ಮೂರು ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ನಡೆಸಿದ ಮಿಡ್‌ನೈಟ್ ಹ್ಯಾಮರ್ ಭಾರೀ ಪ್ರಮಾಣದ ಹಾನಿಯನ್ನುಂಟು ಮಾಡಿತ್ತು. ಅದಾದ ಬಳಿಕ ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ಬಾಂಬ್ ದಾಳಿ ನಡೆಸಿತ್ತು. ಆದರೆ ಇಂದು 12 ದಿನಗಳ ಬಳಿಕ ಇರಾನ್ ಹಾಗೂ ಇಸ್ರೇಲ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್ ಕಮಾಂಡರ್‌ಗಳಿಗೆ ಮೊಸಾದ್ ಎಚ್ಚರಿಕೆ
ಮೂರು ದೇಶಗಳಿಗೆ ಸಿಕ್ಕಿದ್ದೇನು?
ಅಮೆರಿಕ:
ಇರಾನ್ ಹಾಗೂ ಇಸ್ರೇಲ್ ಸಂಘರ್ಷದ ಮೂಲಕ ಪ್ರಮುಖ ಮೂರು ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಿ ನಾಶ ಮಾಡಿದೆ. ದಾಳಿಯಿಂದ ಇನ್ನು ಮುಂದೆ ಇರಾನ್ ಪರಮಾಣು ಬಾಂಬು ತಯಾರಿಸಲು ಸಾಧ್ಯವಿಲ್ಲ.
ಇರಾನ್:
ವಿಶ್ವದ ಅತ್ಯಂತ ಶಕ್ತಿಶಾಲಿ ಹಾಗೂ ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕವನ್ನು ಎದುರು ಹಾಕಿಕೊಂಡಿತ್ತು. ಜೊತೆಗೆ ಕತಾರ್‌ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈ ಮೂಲಕ ಜಗತ್ತಿನ ಶಕ್ತಿಶಾಲಿ ಅಮೆರಿಕದ ನೆಲೆಗೆ ದಾಳಿ ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು.
ಇಸ್ರೇಲ್:
ಈ ಯುದ್ಧದಿಂದಾಗಿ ಇರಾನ್ ರಾಜಧಾನಿ ಟೆಹ್ರಾನ್ ಹಾನಿಯಾಗಿದೆ. ಏರ್ ಡಿಫೆನ್ಸ್ ಧ್ವಂಸಗೊಳಿಸಿ ಇರಾನ್ ಮೇಲೆ ಇಸ್ರೇಲ್ ಬಾಂಬ್ ಸುರಿಮಳೆಗೈದಿತ್ತು. ಬ್ರಿಗೇಡಿಯರ್ ಜನರಲ್ ಅಲಿ ಶಾದ್ಮಾನಿ ಸೇರಿದಂತೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಪ್ರಮುಖ ವ್ಯಕ್ತಿಗಳ ಹತ್ಯೆಯಾಗಿದೆ. ಮುಖ್ಯವಾಗಿ ಇರಾನ್ ಅಣ್ವಸ್ರ್ತ ಹೊಂದಬಾರದು ಎನ್ನುವುದೇ ಇಸ್ರೇಲ್ ಗುರಿಯಾಗಿತ್ತು. ಅಮೆರಿಕ ದಾಳಿಯಿಂದ ಇನ್ನು ಮುಂದೆ ಇಸ್ರೇಲ್ ನಿಟ್ಟುಸಿರು ಬಿಡಬಹುದು.
ಶಾಶ್ವತ ಯುದ್ಧಕ್ಕೆ ಡೊನಾಲ್ಡ್ ಟ್ರಂಪ್ ಯಾವತ್ತೂ ತಯಾರಿರಲಿಲ್ಲ. ಈ ಕುರಿತು ಟ್ರಂಪ್ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ದೀರ್ಘಕಾಲದ ಯುದ್ಧದಿಂದ ರಾಜಕೀಯಕ್ಕೆ ಹಾನಿಕಾರಕವಾಗಬಹುದು. ಇದೇ ಕಾರಣದಿಂದ ಟ್ರಂಪ್, ಕತಾರ್‌ನಲ್ಲಿರುವ ವಾಯುನೆಲೆ ಮೇಲೆ ಇರಾನ್ ದಾಳಿ ನಡೆಸಿದಾಗ ಪ್ರತಿದಾಳಿ ನಡೆಸುವುದು ಬೇಡ ಎಂದು ನಿರ್ಧರಿಸಿದ್ದರು. ಈ ಯುದ್ಧದಿಂದಾಗಿ ಅಮೆರಿಕದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.ಇದನ್ನೂ ಓದಿ: ಇಸ್ರೇಲ್ ನಿಲ್ಲಿಸಿದರೆ ಮಾತ್ರ ದಾಳಿ ನಿಲ್ಲಿಸುತ್ತೇವೆ: ಕದನ ವಿರಾಮ ಒಪ್ಪದ ಇರಾನ್