ಸಣ್ಣ ಸುದ್ದಿಯನ್ನು ಇಂಟರ್‌ನ್ಯಾಷನಲ್‌ ಸುದ್ದಿ ಮಾಡಿದ್ದಕ್ಕೆ ಧನ್ಯವಾದಗಳು: ಡಿಸಿಎಂ

Public TV
1 Min Read

ಬೆಂಗಳೂರು: ನಗರ ಪ್ರದಕ್ಷಿಣೆ ವೇಳೆ ಅಚಾನಕ್ ಸಿಡಿದಿದ್ದ ಕೆಸರನ್ನು ಗನ್‍ಮ್ಯಾನ್ ಒರೆಸಿದ್ದಕ್ಕೆ, ಅಂಧ ದರ್ಬಾರ್ ಎಂದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯನ್ನಾಗಿ ಮಾಡಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ ಡಿಸಿಎಂ ಪರಮೇಶ್ವರ್ ರವರು ತಮ್ಮ ಎರಡನೇ ದಿನದ ಸಿಟಿ ರೌಂಡ್ಸ್ ಮುಂದುವರಿಸಿದ್ದರು. ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಮೇಲಿದ್ದ ನೀರು ಸಚಿವರ ಬಟ್ಟೆ ಹಾಗೂ ಶೂಗೆ ಸಿಡಿದಿತ್ತು. ಅಲ್ಲೇ ಇದ್ದ ತಮ್ಮ ಗನ್‍ಮ್ಯಾನ್ ಹಾಗೂ ಸಹಾಯಕರಿಗೆ ಸ್ವಚ್ಛಮಾಡುವಂತೆ ಹೇಳಿದ್ದರು. ಕೂಡಲೇ ಗನ್‍ಮ್ಯಾನ್ ತಮ್ಮ ಕರವಸ್ತ್ರದ ಮೂಲಕವೇ ಸಚಿವರ ಬಟ್ಟೆ ಹಾಗೂ ಶೂಗಳನ್ನು ಸ್ವಚ್ಛ ಮಾಡಿದ್ದರು. ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಡಿಸಿಎಂ ತಮ್ಮ ಅಂಧಾ ದರ್ಬಾರ್ ಮೆರೆದಿದ್ದರು.

ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಏನೋ ಅಚಾನಕ್ ಆಗಿ ಕೆಸರು ಸಿಡಿದಿತ್ತು, ಕೂಡಲೇ ನಮ್ಮ ಸಿಬ್ಬಂದಿ ಬಂದು ಅದನ್ನು ಸರಿಪಡಿಸಿದರು. ಅದನ್ನೇ ನೀವು ಡಿಸಿಎಂ ಅಂಧ ದರ್ಬಾರ್ ನಡೆಸಿದ್ದಾರೆ. ಎನ್ನುವ ಮೂಲಕ ಸಣ್ಣ ಸುದ್ದಿಯನ್ನು ಅಂತರಾಷ್ಟ್ರೀಯ ಸುದ್ದಿಯನ್ನಾಗಿ ತೋರಿಸಿದ್ದೀರಿ. ಇದಕ್ಕೆ ನಾನು ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ನಗರ ಪ್ರದಕ್ಷಿಣೆಯಲ್ಲಿ ಡಿಸಿಎಂ ಪರಮೇಶ್ವರಿಂದ ಅಂಧ ದರ್ಬಾರ್!

ಪರಮೇಶ್ವರ್ ರವರ ನಡೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಅವರು ನಗರ ಪ್ರದಕ್ಷಿಣೆಗಾಗಿಯೇ ಬಂದಿದ್ದರು. ಈ ತರಹದ ಘಟನೆಗಳು ಸಾಮಾನ್ಯ, ಕೇವಲ ಕೆಸರು ನೀರು ಸಿಡಿದಿದ್ದಕ್ಕೆ, ತಮಗಿಂತ ಕೆಳವರ್ಗದ ಅಧಿಕಾರಿಯಿಂದ ಕೆಲಸ ಮಾಡಿಸಿಕೊಂಡಿದ್ದು ಸರಿಯಲ್ಲ. ಉನ್ನತ ಸ್ಥಾನದಲ್ಲಿರುವ ಅವರು ತಮ್ಮ ಯೋಗ್ಯತೆಗೆ ತಕ್ಕಂತೆ ನಡೆದುಕೊಂಡು, ಎಲ್ಲರಿಗೂ ಮಾದರಿಯಾಗಬೇಕು. ಕೇವಲ ಕೆಸರು ನೀರು ಸಿಡಿದ್ದಿದ್ದಕ್ಕೆ ಚಡಪಡಿಸಿದ ಅವರಿಗೆ ನಮ್ಮ ಕಷ್ಟಗಳು ಹೇಗೆ ಅರ್ಥವಾಗುತ್ತವೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *