ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದ: ADGP ಅಲೋಕ್ ಕುಮಾರ್

Public TV
2 Min Read

ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಅನಾಹುತ ತಪ್ಪಿಸಿದ್ದಕ್ಕೆ ದೇವರಿಗೆ ಧನ್ಯವಾದವನ್ನು ಎಡಿಜಿಪಿ ಅಲೋಕ್ ಕುಮಾರ್ (Alok Kumar) ಸಲ್ಲಿಸಿದರು.

ಅಧರ್ಮದ ಹಾದಿಯಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಅವಳಿ ವೀರ ಪುರುಷರ ಪವಾಡ ಇದಾಗಿದೆ. ಗರೋಡಿ ಕ್ಷೇತ್ರ (Garodi Kshetra) ದ 200 ಮೀಟರ್ ದೂರ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿದೆ. ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳಿದ್ದಾರೆ ಎಂದರು.

Kankanady Garodi Jatre 2021 Highlights - Myoksha | Tulunadu Koti Chennayya Temple - YouTube

ಮಂಗಳೂರಿನ ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ನೆಲೆಯೂರಿರುವ ಕೋಟಿ-ಚೆನ್ನಯ್ಯ ಅವಳಿ ಮಹಾಪುರುಷ ಶಕ್ತಿಗಳು. ದೊಡ್ಡ ಮಟ್ಟದ ಅನಾಹುತ ತಪ್ಪಿಸಿದ್ದು ಈ ಶಕ್ತಿಗಳು. ಮಾನವ ಬಲವೊಂದಿದ್ದರೆ ಸಾಲದು ದೈವಬಲವೂ ಬೇಕು ಅನ್ನೋದಕ್ಕೆ ಸಾಕ್ಷಿ ಎಂದು ತಿಳಿಸಿದರು. ಇದನ್ನೂ ಓದಿ: ಪಂಪ್‌ವೆಲ್‌ ಫ್ಲೈ ಓವರ್‌ ಬಳಿ ಬಾಂಬ್‌ ಸ್ಟೋಟಿಸಲು ಮುಂದಾಗಿದ್ದ ಶಾರೀಕ್‌

ಪ್ರತಿ ದಿನ ಬ್ರಹ್ಮಬೈದರ್ಕಳ ಕ್ಷೇತ್ರಕ್ಕೆ ಬಂದು ಆಟೋ ಚಾಲಕ ಪುರುಷೋತ್ತಮ್ ಕೈ ಮುಗಿಯುತ್ತಿದ್ದರು. ಪ್ರತೀ ಆಟೋ ಚಾಲಕರು ಈ ಕ್ಷೇತ್ರದಲ್ಲಿ ಕೈಮುಗಿದು ದಿನ ಆರಂಭ ಮಾಡುತ್ತಿದ್ದರು. ಹೀಗಾಗಿ ಶಕ್ತಿಯೇ ದೊಡ್ಡ ಅನಾಹುತ ತಪ್ಪಿದೆ ಅನ್ನೋದು ಭಕ್ತರ ನಂಬಿಕೆಯಾಗಿದೆ ಎಂದರು.

ಕರಾವಳಿ ಉಗ್ರರ ಸ್ಲೀಪರ್ ಸೆಲ್ ಆದರೂ ಇಲ್ಲಿ ತನಕ ಬಹಿರಂಗ ಬ್ಲಾಸ್ಟ್ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಯತ್ನ ನಡೆದರೂ ವಿಫಲವಾದ ಬಾಂಬ್ ಬ್ಲಾಸ್ಟ್ ಎಂದು ಹೇಳಿದರು. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್ ಕೇಸ್ – ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

ಚೇತರಿಕೆ ಕಾಣದ ಶಾರಿಕ್ ಆರೋಗ್ಯ: ಬಾಂಬರ್ ಉಗ್ರ ಶಾರಿಕ್ ಆರೋಗ್ಯ ಇನ್ನೂ ಚೇತರಿಸಿಕೊಂಡಿಲ್ಲ. ಶೇ.45 ರಷ್ಟು ಸುಟ್ಟ ಗಾಯಗಳೊಂದಿಗೆ ಮಹಮ್ಮದ್ ಶಾರಿಕ್ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಕಣ್ಣನ್ನು ತೆರೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಮತ್ತೊಂದು ಕಣ್ಣು ಕಾಣದೇ ಶಾರಿಕ್ ನರಳಾಡುತ್ತಿದ್ದಾನೆ. ಆದ್ದರಿಂದ ಇನ್ನು ಕೂಡ ಪೊಲೀಸರು ಶಾರಿಕ್ ವಿಚಾರಣೆ ಮಾಡಿಲ್ಲ. ಕೈಗಳು ಸುಟ್ಟಿರೊದ್ರಿಂದ ಬರವಣಿಗೆ ಅಸಾಧ್ಯ. ಹೀಗಾಗಿ ಬರವಣಿಗೆ ಮೂಲಕ ಹೇಳಿಕೆ ಪಡೆಯಲು ಕೂಡ ಸಾಧ್ಯವಾಗಿಲ್ಲ ಎಂದು ಆಸ್ಪತ್ರೆ ಮತ್ತು ಪೊಲೀಸ್ ಮೂಲಗಳ ಮಾಹಿತಿ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *