ಮುಂಬೈ: 36 ವರ್ಷದ ತಾಯಿ ಹಾಗೂ ಆಕೆಯ 11 ವರ್ಷದ ಮಗಳು ತಮ್ಮ ಡೈಗರ್ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ದುರ್ದೈವಿ ತಾಯಿ-ಮಗಳನ್ನು ನಝಿಯಾ ಜಮಲುದ್ದೀನ್ ಸಿದ್ದಿಕಿ ಹಾಗೂ ತಾನಿಯಾ ಫರೋಜ್ ಸಯ್ಯದ್ ಎಂದು ಗುರುತಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ, ತಾಯಿ-ಮಗಳನ್ನು ಕೊಲೆ ಮಾಡಿ ಬಳಿಕ ಮನೆಯಲ್ಲಿದ್ದ ಸುಮಾರು 1.17ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
ತಾಯಿ-ಮಗಳು ಸಾವನ್ನಪ್ಪಿದ ಬಳಿಕ ನಝಿಯಾ ತಾಯಿ ಬದ್ರುನಿಸಾ ಅಸ್ಲಾಂ ಸೈಯದ್ ಧಿಲ್ ದಿಗ್ರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ `ಘಟನೆಯ ವೇಳೆ ತನ್ನ ಮಗಳ ಪತಿ ಮನೆಯಲ್ಲಿರಲಿಲ್ಲ. ಆತ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಘಟನೆ ನವೆಂಬರ್ 4ರಂದು ತಡರಾತ್ರಿ ನಡೆದಿದೆ ಅಂತ ಹೇಳಿದ್ದಾರೆ.
ನಝೀಯಾಳಿಗೆ ಅನೇಕ ಬಾರಿ ಕರೆ ಮಾಡಿದ್ದೇವು. ಆದ್ರೆ ಆಕೆಯನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾವು ಆಕೆ ವಾಸಿಸುತ್ತಿದ್ದ ನಿವಾಸಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಝೀಯಾ ಕತ್ತು ಸೀಳಿದ ರೀತಿಯಲ್ಲಿ ಹಾಗೂ ಆಕೆಯ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಅಂತ ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ದರೋಡೆ ನಡೆಸಲು ಈ ಕೃತದ ಎಸಗಿರಬಹುದೆಂದು ಶಂಕಿಸಲಾಗಿದೆ. ಈಕೆಯ ಮನೆಯಲ್ಲಿ 20 ವರ್ಷದ ಯುವತಿಯೊಬ್ಬಳು ಮನೆಕೆಲಸಕ್ಕೆ ಇದ್ದಳು ಎನ್ನಲಾಗಿದ್ದು, ಯುವತಿ ಎರಡು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದಳು. ಹೀಗಾಗಿ ಆಕೆಯ ಗೆಳೆಯ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ. ಈ ಕುರಿತು ತನಿಖೆ ಮುಂದುವರೆಸುವುದಾಗಿ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಸದ್ಯ ಘಟನೆಯ ಕುರಿತು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರವೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.