‘ಪ್ರೇಮಲು’ ಬ್ಯೂಟಿಗೆ ಜಾಕ್‌ಪಾಟ್- ‘ದಳಪತಿ 69’ ಸಿನಿಮಾದಲ್ಲಿ ಮಮಿತಾ ಬೈಜು

Public TV
1 Min Read

‘ಪ್ರೇಮಲು’ ಸಿನಿಮಾದ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದ ನಟಿ ಮಮಿತಾ ಬೈಜುಗೆ (Mamitha Baiju) ಗೋಲ್ಡನ್ ಚಾನ್ಸ್‌ವೊಂದು ಸಿಕ್ಕಿದೆ. ವಿಜಯ್ ದಳಪತಿ (Vijay Thalapathy) ನಟನೆಯ ಕೊನೆಯ ಸಿನಿಮಾದಲ್ಲಿ ನಟಿಸುವ ಬಂಪರ್ ಅವಕಾಶವನ್ನು ನಟಿ ಬಾಚಿಕೊಂಡಿದ್ದಾರೆ.

ವಿಜಯ್ ಕೊನೆಯ ಚಿತ್ರವನ್ನು ಕನ್ನಡದ ‘ಕೆವಿಎನ್’ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ದಳಪತಿ 69 ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎಂಬುದನ್ನು ತಂಡ ರಿವೀಲ್ ಮಾಡುತ್ತಿದೆ. ಬಾಬಿ ಡಿಯೋಲ್, ಪೂಜಾ ಹೆಗ್ಡೆ (Pooja Hegde) ನಟಿಸುತ್ತಿರುವ ಸುದ್ದಿ ಅಫಿಷಿಯಲ್ ಆಗಿ ತಿಳಿಸಿದ ಬಳಿಕ ಮಾಲಿವುಡ್ ಬ್ಯೂಟಿ ಮಮಿತಾ ಬೈಜು ಕೂಡ ಚಿತ್ರದ ಭಾಗವಾಗಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

 

View this post on Instagram

 

A post shared by KVN Productions (@kvn.productions)

ವಿಜಯ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ಅಂತೆಯೇ ಮಮಿತಾ ಬೈಜು ಅವರಿಗೂ ಉತ್ತಮ ಪಾತ್ರ ಸಿಕ್ಕಿದೆಯಂತೆ. ನಟನೆಗೆ ಸ್ಕೋಪ್ ಇರುವ ಇದಾಗಿದೆ ಎನ್ನಲಾಗಿದೆ.

ಅಂದಹಾಗೆ, ರೆಬೆಲ್, ಪ್ರೇಮಲು (Premalu) ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಮಮಿತಾಗೆ ತಮಿಳು, ತೆಲುಗು ಮತ್ತು ಮಾಲಿವುಡ್‌ನಿಂದ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ.

Share This Article