Thailand Open – ನಂ.1 ಆಟಗಾರ್ತಿ ಯಮಗುಚಿಯನ್ನು ಸೋಲಿಸಿ ಸೆಮಿಗೆ ಸಿಂಧು ಎಂಟ್ರಿ

By
1 Min Read

ಬ್ಯಾಂಕಾಕ್: ಥೈಲ್ಯಾಂಡ್ ಓಪನ್ 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಅಕಾನೆ ಯಮಗುಚಿಯನ್ನು ಕ್ವಾರ್ಟರ್ ಫೈನಲ್‍ನಲ್ಲಿ ಸೋಲಿಸಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

ಬ್ಯಾಂಕಾಕ್‍ನಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾಟರ್ ಫೈನಲ್ ಪಂದ್ಯ ಬಾರಿ ರೋಚಕವಾಗಿ ಕೂಡಿತ್ತು. 51 ನಿಮಿಷಗಳ ವರೆಗಿನ ಹೋರಾಟದಲ್ಲಿ ಕೊನೆಗೆ ಪಿ.ವಿ ಸಿಂಧು 21-15, 20-22, 21-13 ಸೆಟ್‍ಗಳಿಂದ ಜಪಾನಿನ ಸ್ಟಾರ್ ಆಟಗಾರ್ತಿಯ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‍ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

ಈ ವರ್ಷದ ಆರಂಭದಲ್ಲಿ ಯಮಗುಚಿ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಸಿಂಧುರನ್ನು ಸೋಲಿಸಿದ್ದರು. ಆ ಬಳಿಕ ಥೈಲ್ಯಾಂಡ್ ಓಪನ್ 2022 ಬಾಡ್ಮಿಂಟನ್ ಟೂರ್ನಿಯಲ್ಲಿ ಎದುರುಬದುರಾದ ಇಬ್ಬರು ಆಟಗಾರ್ತಿಯರ ಮಧ್ಯೆ ತೀವ್ರ ಪೈಪೋಟಿ ಎದುರಾಯಿತು. ಆದರೆ ಅಂತಿಮ ಸೆಟ್‍ನಲ್ಲಿ ಯಮಗುಚಿ ಗಾಯಗೊಂಡು ಮೈದಾನ ತೊರೆದರು. ಈ ಮೂಲಕ ಸಿಂಧು ಸೆಮಿಫೈನಲ್‍ಗೆ ಲಗ್ಗೆ ಇಟ್ಟರು. ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ – ಚಿನ್ನದ ಪದಕ ಗೆದ್ದ ಭಾರತದ ಬಾಕ್ಸರ್ ನಿಖತ್ ಜರೀನ್

ಸೆಮಿಫೈನಲ್‍ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಯುಫೀನ್ ವಿರುದ್ಧ ಸಿಂಧು ಸೆಣಸಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *