ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

Public TV
1 Min Read

ಬೆಂಗಳೂರು: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದಾಗಿ ಸಚಿವ ಮಧು ಬಂಗಾರಪ್ಪ (Madhu Bangarappa) ಸ್ಪಷ್ಟನೆ ನೀಡಿದ್ದಾರೆ.

ಇಂದು (ಗುರುವಾರ) ವಿಧಾನಸೌಧ (Vidhanasoudha) ದ ಎರಡನೇ ಮಹಡಿಯಲ್ಲಿರುವ ಕಚೇರಿ ಪೂಜೆ ಮಾಡಿ ಕಾರ್ಯಾರಂಭ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಿಯೇ ಮಾಡ್ತೇವೆ. ಈ ವರ್ಷ ಮಾಡಲ್ಲ ಮುಂದಿನ ವರ್ಷ ಅಂತೆಲ್ಲ ಕೆಲವು ಮಾಧ್ಯಮಗಳಲ್ಲಿ ಬರ್ತಾ ಇದೆ. ಮಕ್ಕಳು ತಪ್ಪು ಓದಬಾರದು, ತಪ್ಪು ಪಠ್ಯಗಳನ್ನು ಮುಂದಿನ ವರ್ಷದ ತನಕ ಕಾಯಬೇಕಿಲ್ಲ. ಹೀಗಾಗಿ ತಜ್ಞರೂ ಕೂಡ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಸ್ವತಃ ಸಿಎಂ (Siddaramaiah) ಅವರೇ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ. ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ (Syllabus) ಪರಿಷ್ಕರಣೆ ಸಂಬಂಧಿಸಿ ಸಭೆ ನಡೆಯುತ್ತಿದೆ. ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೇವೆ. ಯಾವ ಪಾಠ ಮಾಡಬೇಕು, ಯಾವುದು ಮಾಡಬಾರದು ಎಂಬುದನ್ನೂ ತಿಳಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಡೆಪ್ಯುಟಿ ಸ್ಪೀಕರ್ ಬೇಡವೆಂದಿದ್ದ ಪುಟ್ಟರಂಗಶೆಟ್ಟಿ ಯೂ ಟರ್ನ್ – ಕಾಂಗ್ರೆಸ್ ವರಿಷ್ಠರ ನಿರ್ಧಾರಕ್ಕೆ ಒಪ್ಪಿಗೆ

ಇದೇ ವೇಳೆ ಕೇಸರೀಕರಣಕ್ಕೆ ಬ್ರೇಕ್ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಕ್ಕಳ ಒಳಿತಿಗೆ ಸರಿಯಾಗಿ ಕ್ರಮ ತೆಗೆದುಕೊಳ್ತೇವೆ. ಅದು ಇದು ಅಂತ ಏನೂ ಇಲ್ಲ. ತುಂಬಾ ಸೂಕ್ಷ್ಮ ವಿಚಾರಗಳಿವು. ಹಾಗಾಗಿ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕಿದೆ. ದೊಡ್ಡ ಮಟ್ಟದ ಚರ್ಚೆಗಳ ಅವಶ್ಯಕತೆಯಿದೆ. ಹಾಗಾಗಿ ಮಕ್ಕಳ ಒಳಿತನ್ನ ನೋಡಿಯೇ ಮಾಡಬೇಕು. ಮಕ್ಕಳಿಗೆ ಒಳಿತಾಗುವಂತೆ ನಾವು ಮಾಡ್ತೇವೆ ಎಂದು ಸಚಿವರು ಹೇಳಿದರು.

Share This Article