ಭಾರತೀಯ ಮೂಲದ ವೈಭವ್ ತನೇಜಾ ಟೆಸ್ಲಾ CFO – ಬೆಂಗಳೂರಿಗೆ ಇದೆ ಲಿಂಕ್‌

Public TV
2 Min Read

ನ್ಯೂಯಾರ್ಕ್‌: ಭಾರತೀಯ ಮೂಲದ ವೈಭವ್ ತನೇಜಾ (Indian-Origin Vaibhav Taneja) ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (Chief Financial Officer) ಎಲಾನ್‌ ಮಸ್ಕ್‌ (Elon Musk) ಒಡೆತನದ ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾ (Tesla) ನೇಮಕ ಮಾಡಿದೆ.

ಕಳೆದ ನಾಲ್ಕು ವರ್ಷಗಳಿಂದ ಟೆಸ್ಲಾದ ಮಾಸ್ಟರ್ ಆಫ್ ಕಾಯಿನ್ ಮತ್ತು ಹಣಕಾಸು ಮುಖ್ಯಸ್ಥರಾದ ಕಿರ್‌ಹಾರ್ನ್ ಅವರು ಕೆಳಗಿಳಿದ ನಂತರ 45 ವರ್ಷದ ವೈಭವ್ ತನೇಜಾ ಅವರನ್ನು ನೇಮಿಸಲಾಗಿದೆ.

ಚಾರ್ಟರ್ಡ್ ಅಕೌಂಟೆಂಟ್ ಓದಿರುವ ತನೇಜಾ ಅವರು ಮಾರ್ಚ್ 2019 ರಿಂದ ಟೆಸ್ಲಾದಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಫೆಬ್ರವರಿ 2017 ಮತ್ತು ಮೇ 2018 ರ ನಡುವೆ ಸಹಾಯಕ ಕಾರ್ಪೊರೇಟ್ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

ಟೆಸ್ಲಾ ಸೇರ್ಪಡೆಯಾಗಿದ್ದು ಹೇಗೆ?
ಅಮೆರಿಕದ ಸೌರ ಫಲಕ ಅಭಿವೃದ್ಧಿ ಪಡಿಸುವ ಸೋಲಾರ್‌ ಸಿಟಿ ಕಂಪನಿಯ ಹಣಕಾಸು ವಿಭಾಗದಲ್ಲಿ ವೈಭವ್ ತನೇಜಾ ಕೆಲಸ ಮಾಡುತ್ತಿದ್ದರು. ಟೆಸ್ಲಾ 2016 ರಲ್ಲಿ ಈ ಸೋಲಾರ್‌ ಸಿಟಿ ಕಂಪನಿಯನ್ನು ಖರೀದಿಸಿತ್ತು. ಇದಕ್ಕೂ ಮೊದಲು ತನೇಜಾ ಅವರು ಜುಲೈ 1999 ಮತ್ತು ಮಾರ್ಚ್ 2016 ರ ನಡುವೆ ಪ್ರೈಸ್‌ವಾಟರ್‌ ಹೌಸ್‌ಕೂಪರ್ಸ್‌ನಲ್ಲಿ ಉದ್ಯೋಗಿಯಾಗಿದ್ದರು.

ಬೆಂಗಳೂರಿಗೆ ಇದೆ ಸಂಬಂಧ
ಭಾರತದಲ್ಲಿ ಕಂಪನಿ ಸ್ಥಾಪನೆ ಸಂಬಂಧ ಟೆಸ್ಲಾ ಕೇಂದ್ರ ಸರ್ಕಾರದ ಜೊತೆ ಕೆಲ ವರ್ಷಗಳಿಂದ ಮಾತುಕತೆ ನಡೆಸುತ್ತಿದೆ. ಇದಕ್ಕೆ ಪೂರಕ ಎಂಬಂತೆ 2021 ಜನವರಿಯಲ್ಲಿ ಟೆಸ್ಲಾ ಭಾರತದಲ್ಲಿ ಕಚೇರಿ ತೆರೆಯುವ ಸಂಬಂಧ ನೋಂದಣಿ ಮಾಡಿತ್ತು. ಟೆಸ್ಲಾ ಇಂಡಿಯಾ ಮೋಟಾರ್ಸ್‌ ಆಂಡ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಬೆಂಗಳೂರಿನ (Bengaluru) ಲ್ಯಾವೆಲ್ಲೆ ರಸ್ತೆಯಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಿತ್ತು. ಮೂರು ನಿರ್ದೇಶಕರ ಪೈಕಿ ವೈಭವ್ ತನೇಜಾ ಅವರ ಹೆಸರು ಇತ್ತು. ವೈಭವ್ ತನೇಜಾ ಜೊತೆ ವೆಂಕಟರಂಗಮ್‌ ಶ್ರೀರಾಮ್‌ ಮತ್ತು ಜಾನ್‌ ಫೆನ್‌ಸ್ಟಿನ್‌ ಅವರನ್ನು ಟೆಸ್ಲಾ ನಿರ್ದೇಶಕರನ್ನಾಗಿ ನೇಮಿಸಿತ್ತು.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್