ಜಮ್ಮು ಕಾಶ್ಮೀರದ ದೋಡಾದ ಸೇನಾ ಪೋಸ್ಟ್‌ ಮೇಲೆ ಉಗ್ರರ ದಾಳಿ

Public TV
1 Min Read

ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ದೋಡಾದಲ್ಲಿ (Doda) ಮಂಗಳವಾರ ರಾತ್ರಿ ಸೇನಾ ಪೋಸ್ಟ್‌ ಮೇಲೆ ದಾಳಿ (Terrorists Attack ) ನಡೆಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.

ರಿಯಾಸಿಯಲ್ಲಿ (Reasi Attack) ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ದಾಳಿ, ಕಥುವಾದಲ್ಲಿ (Kathua) ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಒಬ್ಬ ನಾಗರಿಕ ಗಾಯಗೊಂಡ ನಂತರ ನಡೆದ ಮೂರನೇ ಘಟನೆ ಇದಾಗಿದೆ.


ರಾತ್ರಿ ಕಥುವಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: 30 ಲಕ್ಷಕ್ಕೆ ಡೀಲ್‌ – ಕೊಲೆ ಮಾಡಿ ದರ್ಶನ್ ಟೀಂ ಸಿಕ್ಕಿಬಿದ್ದಿದ್ದೇ ರೋಚಕ!

ದೋಡಾ ಘಟನೆಯ ಬಗ್ಗೆ ಮಾತನಾಡಿದ ಅವರು, ತಡರಾತ್ರಿ ಚಟರ್ಗಾಲಾ ಪ್ರದೇಶದ ಸೇನಾ ನೆಲೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದರು.

ಭದ್ರತಾ ಪಡೆಗಳು ಈಗ ಕಥುವಾದ ಹೀರಾನಗರ ಪ್ರದೇಶದಲ್ಲಿ ಡ್ರೋನ್‌ ಬಳಸಿಕೊಂಡು ಉಳಿದಿರುವ ಭಯೋತ್ಪಾದಕನನ್ನು ಹುಡುಕುತ್ತಿವೆ.

Share This Article