ವಾರಣಾಸಿ ಬಾಂಬ್ ಬ್ಲಾಸ್ಟ್‌ ಹಂತಕನಿಗೆ ಮರಣದಂಡನೆ – 16 ವರ್ಷಗಳ ಬಳಿಕ ಶಿಕ್ಷೆ

Public TV
1 Min Read

ಲಕ್ನೋ: 2006ರಲ್ಲಿ ವಾರಣಾಸಿಯಲ್ಲಿ ಸಂಭವಿಸಿದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿದ್ದ ಭಯೋತ್ಪಾದಕ ವಲಿಯುಲ್ಲಾಗೆ ಗಾಜಿಯಾಬಾದ್ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.

BOMB BLAST

ವಾರಣಾಸಿಯಲ್ಲಿ 2006ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ವಲಿಯುಲ್ಲಾನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 16 ವರ್ಷಗಳ ನಂತರ ಶನಿವಾರ (ಜೂನ್ 4ರಂದು) ದೋಷಿ ಎಂದು ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು.  ಇದನ್ನೂ ಓದಿ: ಭಾರತ ಮತಾಂಧರನ್ನು ಪ್ರಶಂಸಿಸುವುದಿಲ್ಲ: ಪಾಕ್ ಪ್ರಧಾನಿಗೆ ಭಾರತ ಸರ್ಕಾರ ತೀವ್ರ ತರಾಟೆ

ಇಂದು ಶಿಕ್ಷೆಯನ್ನು ಪ್ರಕಟಿಸಿದ್ದು, ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾಗೆ ಮರಣದಂಡನೆ ವಿಧಿಸಿದೆ. ಇದನ್ನೂ ಓದಿ: ಸಂಕುಚಿತ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ – OICಗೆ ವಿದೇಶಾಂಗ ಇಲಾಖೆಯ ತಿರುಗೇಟು

CRIME

ಬಾಂಬ್ ಸ್ಫೋಟ ಪ್ರಕರಣಗಳು: 2006ರ ಮಾರ್ಚ್ 7ರಂದು ಉತ್ತರ ಪ್ರದೇಶದ ವಾರಣಾಸಿಯ ಸಂಕತ್ಮೋಚ್‌ನ ದೇವಸ್ಥಾನ ಮತ್ತು ಕ್ಯಾಂಟ್ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರಲ್ಲಿ 30 ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದರು. 2006ರ ಏಪ್ರಿಲ್ 5 ರಂದು ಉತ್ತರ ಪ್ರದೇಶ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಗ್ರಾಮದ ನಿವಾಸಿ ವಲಿಯುಲ್ಲಾನನ್ನು ಬಂಧಿಸಿದ್ದರು. ಅಲಹಾಬಾದ್ ಹೈಕೋರ್ಟ್ ಆದೇಶದ ಮೇರೆಗೆ ಪ್ರಕರಣವನ್ನು ವಿಚಾರಣೆಗಾಗಿ ಗಾಜಿಯಾಬಾದ್‌ಗೆ ವರ್ಗಾಯಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *