ಚಾಮರಾಜನಗರ | ತಾಯಿ ಹುಲಿ ಜೊತೆ ಮರಿಗಳು ಕಾಣಿಸಿಕೊಂಡಿದ್ದ ಪ್ರಕರಣ – 10 ತಿಂಗಳ ಮರಿ ಸೆರೆ

1 Min Read

ಚಾಮರಾಜನಗರ: ನಂಜೇದೇವನಪುರ ಬಳಿ ತಾಯಿ ಹಾಗೂ ನಾಲ್ಕು ಮರಿ ಹುಲಿಗಳು (Tiger) ಕಾಣಿಸಿಕೊಂಡಿದ್ದ ಪ್ರಕರಣದಲ್ಲಿ ಇದೀಗ ಮತ್ತೊಂದು ಗಂಡು ಹುಲಿ ಮರಿ ಸೆರೆ ಹಿಡಿಯಲಾಗಿದೆ.

ಸಾಕಾನೆ ಬಳಸಿ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಈಗಾಗಲೇ ತಾಯಿ ಹಾಗೂ ಒಂದು ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿತ್ತು. ಇನ್ನೂ ಉಳಿದ ಹುಲಿ ಮರಿಗಳು ಆನೆಮಡುವಿನ ಕೆರೆ ಹಿಂಭಾಗ ಬೀಡು ಬಿಟ್ಟಿವೆ. ಇದನ್ನೂ ಓದಿ: ಚಾಮರಾಜನಗರ | 7 ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ತಾಯಿ ಹುಲಿ ಸೆರೆ!

ಉಳಿದಿರುವ ಎರಡು ಹುಲಿ ಮರಿಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ಉಳಿದ ಮರಿಗಳನ್ನೂ ಹಿಡಿಯುವ ಕೆಲಸ ಮಾಡಬೇಕು ಇಲ್ಲವಾದರೆ ರೈತರು ನಿತ್ಯ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಕೇಸ್‌ – ʻಶಿಕಾರಿʼ ರಾಜ ಗೋವಿಂದ ಅರೆಸ್ಟ್‌

Share This Article