ಮುನೇಶ್ವರಸ್ವಾಮಿ ದೇಗುಲಕ್ಕೆ ಟೆಂಪೊ ಡಿಕ್ಕಿ – ಪೂಜೆ ಮಾಡುತ್ತಿದ್ದ ಮೂವರಿಗೆ ಗಾಯ, ಓರ್ವ ಸಾವು

Public TV
1 Min Read

ಕೋಲಾರ: ಟೆಂಪೊ ಒಂದು ದೇಗುಲಕ್ಕೆ ಡಿಕ್ಕಿ ಹೊಡೆದಿದ್ದು, ದೇಗುಲದಲ್ಲಿದ್ದ ಮೂವರು ಮಹಿಳೆಯರಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆಯ ಮಾಲೂರು (Malur) ತಾಲೂಕಿನ ಮಾಸ್ತಿ ಬಳಿಯ ಹಸಾಂಡಹಳ್ಳಿ (Hasandahalli) ಗ್ರಾಮದಲ್ಲಿ ನಡೆದಿದೆ.

ಮಾಸ್ತಿ ಗ್ರಾಮದ ಚಂದ್ರಶೇಖರ್ (38) ಮೃತ ವ್ಯಕ್ತಿ.ಇದನ್ನೂಓದಿ: ವಿಜಯ್ ಕೊನೆಯ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್

ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಬಳಿಯ ಹಸಾಂಡಹಳ್ಳಿ ಗ್ರಾಮದಲ್ಲಿರುವ ಮುನೇಶ್ವರಸ್ವಾಮಿ ದೇಗುಲದಲ್ಲಿ ಈ ಘಟನೆ ನಡೆದಿದೆ. ಮಹೇಂದ್ರ ಟೆಂಪೊ ಒಂದು ದೇಗುಲಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ದೇಗುಲದಲ್ಲಿ ಪೂಜೆ ಮಾಡುತ್ತಿದ್ದ ಮೂವರು ಮಹಿಳೆಯರು ಗಂಭೀರ ಗಾಯಗೊಂಡಿದ್ದು, ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂಓದಿ: ವಿರಾಟ್‌ ಕೊಹ್ಲಿ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ: ತೇಜಸ್ವಿ ಯಾದವ್‌

Share This Article