ಪೂಜಾ ಹೆಗ್ಡೆಗೆ ಅಂತ ದುಬಾರಿ ಕಾರು ಖರೀದಿಸಿದ್ರಾ ತೆಲುಗಿನ ಸ್ಟಾರ್ ಡೈರೆಕ್ಟರ್?

Public TV
2 Min Read

ಹೆಸರಾಂತ ನಟಿ, ಕರಾವಳಿ ಚೆಲುವೆ ಪೂಜಾ ಹೆಗ್ಡೆ (Pooja Hegde) ಹೆಸರು ಮತ್ತೆ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚಿನ ಸಿನಿಮಾಗಳು ಗೆಲ್ಲದೇ ಇದ್ದರೂ, ಡೇಟಿಂಗ್ (Dating) ವಿಚಾರವಾಗಿ ಆಗಾಗ್ಗೆ ಪೂಜಾ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್ ಜೊತೆ ಪೂಜಾಗೆ ಸಂಬಂಧವಿದೆ ಎಂದು ಹೇಳಲಾಗಿತ್ತು. ಪೂಜಾ ಮತ್ತು ಸಲ್ಮಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ, ಪೂಜಾ ಸಹೋದರನ ಮದುವೆ ಸಲ್ಮಾನ್ ಕೂಡ ಬಂದಿದ್ದರು.

ಸಲ್ಮಾನ್ ಖಾನ್ ಜೊತೆಯಷ್ಟೇ ಅಲ್ಲ, ಪೂಜಾ ನಟಿಸಿರುವ ಸಿನಿಮಾಗಳ ಬಹುತೇಕ ನಟರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ಆದರೂ, ಈವರೆಗೂ ಅವರು ಡೇಟಿಂಗ್ ವಿಚಾರವಾಗಿ ಯಾವತ್ತೂ ಪ್ರತಿಕ್ರಿಯೆ ನೀಡಿಲ್ಲ. ಆ ಕುರಿತು ಮಾತನಾಡುವಂತಹ ಧೈರ್ಯವನ್ನೂ ಅವರು ಮಾಡಿಲ್ಲ. ಇದೀಗ ದುಬಾರಿ ಕಾರಿನ ಕಾರಣಕ್ಕಾಗಿ ಪೂಜಾ ಮತ್ತೆ ಸದ್ದು ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕರು ಪೂಜಾಗೆ ಎರಡು ಕೋಟಿ ಬೆಲೆಯ ದುಬಾರಿ ಕಾರು ನೀಡಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

ತೆಲುಗಿನ ಸ್ಟಾರ್ ಡೈರೆಕ್ಟರ್  ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಇತ್ತೀಚೆಗಷ್ಟೇ ದುಬಾರಿ ಕಾರೊಂದನ್ನು (Car) ಖರೀದಿಸಿದ್ದಾರೆ. ಆ ಕಾರನ್ನು ಪೂಜಾ ಹೆಗ್ಡೆಗೆ ಕೊಟ್ಟಿದ್ದಾರೆ ಎನ್ನುವುದು ವರ್ತಮಾನ. ತ್ರಿವಿಕ್ರಮ್ ನಿರ್ದೇಶನದ ಎರಡು ಸಿನಿಮಾಗಳಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದರು. ಅರವಿಂದ ಸಮೇತ ವೀರ ರಾಘವ ಹಾಗೂ ಅಲಾ ವೆಕುಂಠಪುರಂಲೋ ಚಿತ್ರಗಳಿಗೆ ಇವರೇ ನಾಯಕಿ. ಎರಡೂ ಹಿಟ್ ಚಿತ್ರಗಳು. ಈಗ ಮೂರನೇ ಬಾರಿ ಪೂಜಾ ಇದೇ ನಿರ್ದೇಶಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತ್ರಿವಿಕ್ರಮ್ ನಿರ್ದೇಶನದ ಮಹೇಶ್ ಬಾಬು ನಟನೆಯ ಹೊಸ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಸಿನಿಮಾದ ಶೂಟಿಂಗ್ ಗೆ ಬರುವುದಕ್ಕಾಗಿ ಪೂಜಾಗೆ ಕಾರು ಕೊಡಿಸಿದ್ದಾರೆ ಎನ್ನುವುದು ಗುಸುಗುಸು. ದುಬಾರಿ ಕಾರು ಕೊಡಿಸಿದ್ದರ ಕಾರಣಕ್ಕಾಗಿ ಇಬ್ಬರ ಮಧ್ಯೆ ಏನೋ ನಡೆದಿದ್ಯಾ ಎನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದಾರೆ. ಆದರೆ, ಈ ಕಾರಿನ ಹಿಂದೆ ಬೇರೆಯದ್ದೇ ಕಥೆ ಇದೆ ಎನ್ನುವುದು ಚಿತ್ರತಂಡದ ಮಾತು. ನಟಿಗೆ ಕೇವಲ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದಕ್ಕಾಗಿ ಮಾತ್ರ ಈ ಕಾರು ಬಳಕೆ ಆಗುತ್ತಿದೆಯಂತೆ.

Share This Article
Leave a Comment

Leave a Reply

Your email address will not be published. Required fields are marked *