ತೆಲುಗಿನ ನಟ ಬೆಲ್ಲಂಕೊಂಡ ವಿರುದ್ಧ ವಂಚನೆಯ ಆರೋಪ, ಪ್ರಕರಣ ದಾಖಲು

By
1 Min Read

ಹೈದರಾಬಾದ್: ಫೈನಾನ್ಷಿಯರ್‌ಗೆ 85 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತೆಲುಗು ಚಿತ್ರ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಮತ್ತು ಅವರ ಪುತ್ರ ಮತ್ತು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ವಿರುದ್ಧ ಹೈದರಾಬಾದ್ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.

ನಗರದ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಅಪರಾಧ ಠಾಣೆ (ಸಿಸಿಎಸ್) ಪೊಲೀಸರು ಇಬ್ಬರ ವಿರುದ್ಧವೂ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

2018ರಲ್ಲಿ ನಿರ್ಮಾಪಕ ಮತ್ತು ಅವರ ಪುತ್ರ ಸಿನಿಮಾ ಮಾಡಲು ತಮ್ಮಿಂದ ಕಂತುಗಳಲ್ಲಿ ಹಣ ತೆಗೆದುಕೊಂಡಿದ್ದಾರೆ ಎಂದು ದೂರಿ ವಿಎಲ್ ಶ್ರವಣ್ ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು. ಮಾಲಿನೇನಿ ಗೋಪಿಚಂದ್ ಅವರ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರಕ್ಕೆ ಸಹಾಯಕ ನಿರ್ಮಾಪಕನಾಗಿ ತಮ್ಮನ್ನು ತೆಗೆದುಕೊಳ್ಳುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದರು ಎಂದು ಅರ್ಜಿದಾರರು ಹೇಳಿದ್ದಾರೆ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

ತಂದೆ, ಮಗನ ಮಾತನ್ನು ನಂಬಿ ಅವರಿಗೆ ಹಣ ನೀಡಿದ್ದೆ. ಆದರೆ ಅವರು ನಂಬಿಸಿ ಮೋಸ ಮಾಡಿದ್ದಾರೆ ಎಂದು ಫೈನಾನ್ಷಿಯರ್ ನ್ಯಾಯಾಲಯಕ್ಕೆ ತಿಳಿಸಿದರು. ಸುರೇಶ್ ಹಾಗೂ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿತ್ತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

ಸಿಸಿಎಸ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 417, 420 (ವಂಚನೆ), ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನಿಖೆಯ ಭಾಗವಾಗಿ, ಪೊಲೀಸರು ದೂರುದಾರರಿಗೆ ಸೂಕ್ತ ದಾಖಲೆಗಳೊಂದಿಗೆ ತನಿಖಾಧಿಕಾರಿಯ ಮುಂದೆ ಹಾಜರಾಗಲು ಮತ್ತು ಅವರ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯವು ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *