ನಟನೆಗೆ ಗುಡ್‌ ಬೈ ಹೇಳಿ, ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಅಭ್ಯಾಸ ಆರಂಭಿಸಿದ ನಟಿ ಪ್ರಗತಿ

Public TV
2 Min Read

ಹುಭಾಷಾ ನಟಿ ಪ್ರಗತಿ (Pragathi) ಅವರು ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದಾರೆ. ನಟನೆ ಬಿಟ್ಟು ವೇಟ್ ಲಿಫ್ಟಿಂಗ್ (Weight Lifting) ಸಾಹಸಕ್ಕೆ ನಟಿ ಕೈ ಹಾಕಿದ್ದಾರೆ. ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ’ ಎಂದರಾ ಹಾಸ್ಟೆಲ್ ಹುಡುಗರು?

ಕನ್ನಡದ ಪ್ರೇಮ ಖೈದಿ, ಹೃದಯವಂತ, ವಿನಾಯಕ ಗೆಳೆಯರ ಬಳಗ ಸಿನಿಮಾದಲ್ಲಿ ಪ್ರಗತಿ (Actress Pragathi) ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಪೋಷಕ ಪಾತ್ರಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. ಭಾಷೆ ಯಾವುದೇ ಆಗಿದ್ರು, ಆ ಪಾತ್ರವೇ ತಾವಾಗಿ ಪ್ರಗತಿ ನಟಿಸುತ್ತಾರೆ.

90ರ ದಶಕದಲ್ಲಿ ನಟಿ ಪ್ರಗತಿ ನಾಯಕಿಯಾಗಿ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮೆರೆದರು. ಮದುವೆಯ ನಂತರ ನಟನೆಗೆ ಗುಡ್ ಬೈ ಹೇಳಿದ್ದರು. ಬಹಳ ವರ್ಷಗಳ ನಂತರ ಪೋಷಕ ಪಾತ್ರಗಳ ಮಾಡುವ ಮುಖಾಂತರ ಗಮನ ಸೆಳೆದರು. ಪತಿಗೆ ಡಿವೋರ್ಸ್‌ ನೀಡಿದ್ದಾರೆ. ಇಬ್ಬರ ಮಕ್ಕಳ ಪಾಲನೆಯನ್ನ ಮಾಡ್ತಿದ್ದಾರೆ. ಪ್ರಗತಿ ಸದ್ಯ ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿ, ಈ ಮೂಲಕ ತಮ್ಮ ಬಗ್ಗೆ ಮತ್ತು ವರ್ಕೌಟ್ ಸೇರಿದಂತೆ ಹಲವು ಬಗೆಯ ವಿಚಾರಗಳನ್ನ ಹೇಳ್ತಿದ್ದಾರೆ. ಈಗ ಪ್ರಗತಿ ಕೆಲವು ದಿನಗಳ ಕಾಲ ನಟನೆಯಿಂದ ದೂರ ಉಳಿದು ವೇಟ್ ಲಿಫ್ಟಿಂಗ್ ಕಡೆ ಗಮನ ಹರಿಸಿದ್ದಾರೆ. ‘ವಿಷನ್ ಡಿಸಿಪ್ಲಿನ್ ಪವರ್ ನ್ಯಾಷನಲ್ 2023’ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಗತಿ ಭಾಗವಹಿಸುತ್ತಿದ್ದಾರಂತೆ. ವೇಟ್ ಲಿಫ್ಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪ್ರಗತಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಹೊಸ ಪ್ರಯಾಣ ಈಗಷ್ಟೇ ಆರಂಭವಾಗಿದೆ. 250 ಕಿಲೋ ಭಾರ ಎತ್ತುವ ಮೂಲಕ ಈ ಪ್ರಯಾಣ ಆರಂಭವಾಗಿದೆ. ಗುರಿ ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ. ಈ ಜರ್ನಿಯಲ್ಲಿ ನನಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಗತಿ ತನ್ನನ್ನು ಬೆಂಬಲಿಸಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ತೆಲುಗು ನಟಿ ಪ್ರಗತಿ ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಅದಾದ ನಂತರ ಎರಡನೇ ಮದುವೆ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು. ಈಗ ಪ್ರಗತಿ ಮತ್ತೆ ಟಾಕ್ ಆಫ್ ದಿ ಟೌನ್ ಎನಿಸಿದ್ದಾರೆ. ನಟನೆ ಬಿಟ್ಟು ವೇಟ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್