ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ

By
1 Min Read

ತೆಲುಗು ಸಿನಿಮಾ ರಂಗದ ಪಾಲಿಗೆ ಒಂದು ರೀತಿಯಲ್ಲಿ ವಿಲನ್ ಆಗಿದ್ದರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ. ತೆಲುಗು ಸಿನಿಮಾ ರಂಗ ಮತ್ತು ಆಂಧ್ರ ಸರಕಾರ ಒಂದು ರೀತಿಯಲ್ಲಿ ಹಾವು ಮುಂಗಸಿಯಾಗಿದ್ದವು. ಟಿಕೆಟ್ ದರ ಇಳಿಕೆ, ಫ್ಯಾನ್ಸ್ ಶೋ ಬ್ಯಾನ್, ಬೆನಿಫಿಟ್ ಶೋಗಳನ್ನೂ ಕ್ಯಾನ್ಸಲ್ ಮಾಡಿದ್ದ ಆಂಧ್ರ ಸರಕಾರ, ಕೋವಿಡ್ ಕಾರಣದಿಂದಾಗಿ ಶೇ.50ರಷ್ಟು ಆಸನವನ್ನು ಮಾತ್ರ ಉಪಯೋಗಿಸಬೇಕು ಎನ್ನುವ ನಿಯಮ ಹೇರಿತ್ತು. ಹೀಗಾಗಿ ತೆಲುಗಿನ ಭಾರೀ ಬಜೆಟ್ ಚಿತ್ರಗಳು ರಿಲೀಸ್ ಆಗಿರಲಿಲ್ಲ. ಇದನ್ನೂ ಓದಿ : ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಸಲು ಖಡಕ್ ಸುತ್ತೋಲೆ

 ಸತತ ಆರೇಳು ತಿಂಗಳಿಂದ ಜಗನ್ ರೆಡ್ಡಿ ಅವರನ್ನು ತೆಲುಗು ಸಿನಿಮಾ ರಂಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ಅಲ್ಲಿನ ವಾಣಿಜ್ಯ ಮಂಡಳಿ ಭೇಟಿ ಮಾಡಿ ಮನವಿ ಮಾಡಿಕೊಂಡರೂ, ಜಗನ್ ಜಗ್ಗಿರಲಿಲ್ಲ. ಮೊನ್ನೆಯಷ್ಟೇ ಹಿರಿಯ ನಟ ಚಿರಂಜೀವಿ, ನಿರ್ದೇಶಕ ರಾಜಮೌಳಿ ಸೇರಿದಂತೆ ಹಲವು ಕಲಾವಿದರು ಜಗನ್ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೀಗ ಮಾತುಕತೆ ಫಲ ಕೊಟ್ಟಿದೆ. ಶೇ.100ರಷ್ಟು ಆಸನಕ್ಕೆ ಅವಕಾಶ ಕಲ್ಪಿಸಿರುವ ಸರಕಾರ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಡಲಿಕೆಯನ್ನು ಮಾಡಲಿಂದು ಎಂದು ಹೇಳಿದೆ. ಹಾಗಾಗಿ ತೆಲುಗು ಸಿನಿಮಾ ರಂಗ ನಿಟ್ಟುಸಿರಿಟ್ಟಿದೆ. ಇದನ್ನೂ ಓದಿ : ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್


ಆರ್.ಆರ್.ಆರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾರೀ ಬಜೆಟ್ ಚಿತ್ರಗಳು ಬಿಡುಗಡೆಗಾಗಿ ಕಾದಿವೆ. ಹಿಂದಿ, ಕನ್ನಡ ಸೇರಿದಂತೆ ಇತರ ಭಾಷೆಯ ಸ್ಟಾರ್ ನಟರ ಚಿತ್ರಗಳು ಕೂಡ ತೆಲುಗಿಗೆ ಡಬ್ ಆಗಿ ರಿಲೀಸ್ ಮಾಡಲು ತುದಿಗಾಲಲ್ಲಿ ನಿಂತಿವೆ. ಆಂಧ್ರ ಸರಕಾರದ ಕೊಟ್ಟ ಸಿಹಿ ಸುದ್ದಿಯಿಂದಾಗಿ ಎಲ್ಲರೂ ನಿಟ್ಟುಸಿರಿಟ್ಟಿದ್ದಾರೆ. ಇದನ್ನೂ ಓದಿ : ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ


ಈ ಸುದ್ದಿ ಸಿಗುತ್ತಿದ್ದಂತೆಯೇ ಆರ್.ಆರ್.ಆರ್ ಮತ್ತು ಇತರ ಚಿತ್ರಗಳ ನಿರ್ದೇಶಕರು ಬಿಡುಗಡೆಯ ದಿನಾಂಕವನ್ನು ಹುಡುಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *