ತೆಲುಗಿನ ನೃತ್ಯ ಸಂಯೋಜಕ ರಾಕೇಶ್ ಮಾಸ್ಟರ್ ವಿಧಿವಶ

Public TV
1 Min Read

ಟಾಲಿವುಡ್ (Tollywood) ಚಿತ್ರರಂಗದ ನೃತ್ಯ ಸಂಯೋಜಕ (Choreographer) ರಾಕೇಶ್ ಮಾಸ್ಟರ್ (Rakesh Master) ಅವರು ಜೂನ್ 18ರಂದು ನಿಧನರಾಗಿದ್ದಾರೆ. ಭಾನುವಾರ ಸಂಜೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸನ್‌ಸ್ಟ್ರೋಕ್ ಆದ ಕಾರಣದಿಂದ ಇಹಲೋಕ ತ್ಯಜಿಸಿದ್ದಾರೆ.

ಮಾಸ್ಟರ್ ರಾಕೇಶ್ ಅವರು 1500ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಾಕಷ್ಟು ಸ್ಟಾರ್ ನಟ-ನಟಿಯರ ಜೊತೆ ಕೆಲಸ ಮಾಡಿದ್ದಾರೆ. ಈ ನಡುವೆ ಅನಾರೋಗ್ಯ ಹೆಚ್ಚಾದ ಕಾರಣ ರಾಕೇಶ್ ಮಾಸ್ಟರ್ ಅವರನ್ನು ಭಾನುವಾರ (ಜೂನ್ 18) ಮಧ್ಯಾಹ್ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ರಾಕೇಶ್ ಮಧುಮೇಹ ರೋಗಿಯಾಗಿದ್ದರು. ಅವರು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ವರದಿಯ ಪ್ರಕಾರ, ರಾಕೇಶ್ ಮಾಸ್ಟರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ರಾಕೇಶ್ ಮಾಸ್ಟರ್ ಅವರಿಗೆ 53 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ:ಅಪ್ಪ- ಅಮ್ಮನ ಕ್ಯೂಟ್ ಲವ್‌ ಸ್ಟೋರಿ ಹಂಚಿಕೊಂಡು ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ವಿಶ್‌ ‌

ಅನಾರೋಗ್ಯ ಸಮಸ್ಯೆಯಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಆದರೆ ರಾಕೇಶ್ ಮಾಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಫೇಮಸ್ ಆಗಿದ್ದರು. ವಿಚಿತ್ರವಾಗಿ ಹೇಳಿಕೆಗಳನ್ನು ನೀಡುತ್ತಿದ್ದ ರಾಕೇಶ್ ಮಾಸ್ಟರ್ ವೈರಲ್ ಆಗಿದ್ದರು. ಹೀಗೆ ವಿಭಿನ್ನವಾಗಿ ನಡೆದುಕೊಳ್ಳುತ್ತಿದ್ದ ಕಾರಣ ಟ್ರೋಲಿಗರಿಗೆ ರಾಕೇಶ್ ಮಾಸ್ಟರ್ ಫೇವರಿಟ್ ಆಗಿದ್ದರು.

ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನೃತ್ಯ ಸಂಯೋಜಕ ರಾಕೇಶ್ ಮಾಸ್ಟರ್ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. 1500ಕ್ಕೂ ಹೆಚ್ಚು ಸಿನಿಮಾಗೆ ಕೆಲಸ ಮಾಡಿರೋ ರಾಕೇಶ್‌ಗೆ ನಿಧನಕ್ಕೆ ಅಭಿಮಾನಿಗಳು ಕೂಡ ಸಂತಾಪ ಸೂಚಿಸಿದ್ದಾರೆ.

Share This Article