ತೆಲುಗಿನ ಬಿಗ್ ಬಾಸ್‌ನಲ್ಲಿ ಕನ್ನಡದ ಕಲರವ- ಅಮ್ಮ, ಮಗನ ಬಾಂಧವ್ಯ ಕಂಡು ವೀಕ್ಷಕರು ಭಾವುಕ

Public TV
1 Min Read

ತೆಲುಗಿನ ಬಿಗ್ ಬಾಸ್ ಸೀಸನ್ 8ರಲ್ಲಿ (Bigg Boss Telugu 8)  ಕನ್ನಡದ ಕಲರವ ಕೇಳಿ ಬಂದಿದೆ. ಈ ಶೋನಲ್ಲಿ ಮೈಸೂರು ಮೂಲದ ಕನ್ನಡದ ನಟ ನಿಖಿಲ್ ಮಳಿಯಕ್ಕಲ್ (Nikhil Maliyakkal) ಅಧ್ಬುತವಾಗಿ ಆಟವಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿರುವ ಮಗ ನಿಖಿಲ್‌ಗೆ ತಾಯಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ಅಮ್ಮನ ಪತ್ರ ಕಂಡು ನಿಖಿಲ್ ಕಣ್ಣೀರಿಟ್ಟಿದ್ದಾರೆ.


ಬಿಗ್ ಬಾಸ್‌ನಲ್ಲಿ ನಿಖಿಲ್ ಬೇಸರಕ್ಕೆ ಒಳಗಾಗಿ ನಾನು ನಿಮ್ಮನ್ನ ನೋಡದೇ ಇರುವುದಕ್ಕೆ ಆಗುತ್ತಿಲ್ಲ ಎಂದು ತಾಯಿಗೆ ಪತ್ರ ಬರೆದಿದ್ದರು. ಇದಕ್ಕಾಗಿ ಶೋನಲ್ಲಿ ತಾಯಿ ಬರೆದ ಪತ್ರವನ್ನು ಪ್ರಕಟಿಸಲಾಯಿತು. ನೀನು ಹೇಗಿದೆಯೋ ಹಾಗೇ ಇರು. ಬೇರೆಯವರಿಗಾಗಿ ಚೇಂಜ್ ಮಾಡಿಕೊಳ್ಳಬೇಡ. ಎಮೋಷನಲ್ ಆಗಬೇಡ. ಎಲ್ಲರೂ ನಿನ್ನ ಜೊತೆ ರೇಸ್‌ನಲ್ಲಿದ್ದಾರೆ. ನೀನು ಆಡುತ್ತಿರುವುದು ನನಗೆ ಸಖತ್ ಇಷ್ಟ ಆಗುತ್ತಿದೆ. ಕಪ್ ಲಿಫ್ಟ್ ಮಾಡುವುದನ್ನ ನೋಡಲು ಕಾಯುತ್ತಿದ್ದೇವೆ. ಐ ಲವ್ ಯು ಕಂದ ಎಂದು ಹೇಳಿದ್ದಾರೆ. ಈ ಪತ್ರವನ್ನು ಪ್ರೇರಣಾ ಓದಿ ಹೇಳಿದ್ದಾರೆ. ಅದನ್ನು ಕೇಳಿ ನಿಖಿಲ್ ಭಾವುಕರಾಗಿದ್ದಾರೆ. ಈ ಕುರಿತ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

ಈ ಶೋನಲ್ಲಿ ನಿಖಿಲ್ ಜೊತೆ ಕನ್ನಡದವರೇ ಆದ ಪ್ರೇರಣಾ ಕಂಬಂ, ಪೃಥ್ವಿರಾಜ್ ಶೆಟ್ಟಿ, ಯಶಮಿ ಗೌಡ ಕೂಡ ಭಾಗಿಯಾಗಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಈ ಪ್ರತಿಭೆಗಳು ಇದೀಗ ತೆಲುಗಿನಲ್ಲಿ ಸದ್ದು ಮಾಡುತ್ತಿದ್ದಾರೆ.

Share This Article