‘ಲವ್‌ಸ್ಟೋರಿ’ ನಿರ್ದೇಶಕನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ

Public TV
1 Min Read

ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಜೊತೆಗಿನ ‘ಹಾಯ್ ನಾನ್ನಾ’ ಸಿನಿಮಾದ ಸಕ್ಸಸ್ ನಂತರ ನ್ಯಾಚುರಲ್‌ ಸ್ಟಾರ್ ನಾನಿ (‌Natural Star Nani) ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಲವ್‌ಸ್ಟೋರಿ, ಕುಬೇರ ಸಿನಿಮಾಗಳ ನಿರ್ದೇಶಕ ಶೇಖರ್ ಕಮ್ಮುಲ ಜೊತೆ ನಾನಿ ಕೈಜೋಡಿಸಿದ್ದಾರೆ.

ನಾನಿ ಸದಾ ಕಥೆಗೆ ಪ್ರಾಮುಖ್ಯತೆ ನೀಡ್ತಾರೆ. ಪ್ರತಿ ಸಿನಿಮಾದಲ್ಲೂ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ವಿಭಿನ್ನ ಕಥೆಯೊಂದನ್ನು ನಟ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ ಕೂದಲಿಗೆ ಬಿತ್ತು ಕತ್ತರಿ

ಶೇಖರ್ ಕಮ್ಮುಲ ನಿರ್ದೇಶನದ ಹೊಸ ಚಿತ್ರದಲ್ಲಿ ನಾನಿ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದ್ದು, ಶೇಖರ್‌ ಬರೆದ ಕಥೆ ನಾನಿಗೆ ಇಷ್ಟವಾಗಿದೆ. ಈ ಚಿತ್ರಕ್ಕೆ ಸುನೀಲ್ ಎಂಬುವವರು ನಿರ್ಮಾಣ ಮಾಡಲಿದ್ದಾರೆ. ಇದನ್ನೂ ಓದಿ:ವಿಭಿನ್ನ ಲುಕ್‌ನಲ್ಲಿ ರಶ್ಮಿಕಾ- ‘ಕುಬೇರ’ ಚಿತ್ರದ ಫಸ್ಟ್ ಲುಕ್ ರಿವೀಲ್

ಪ್ರಸ್ತುತ ಶೇಖರ್ ಕಮ್ಮುಲ (Shekar Kammula) ಸದ್ಯ ‘ಕುಬೇರ’ (Kubera) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಧನುಷ್, ರಶ್ಮಿಕಾ, ಅಕ್ಕಿನೇನಿ ನಾಗಾರ್ಜುನ ನಟನೆಯ ಸಿನಿಮಾ ಇದಾಗಿದೆ. ಬಳಿಕ ನಾನಿ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

Share This Article