ಬಹುಕಾಲದ ಗೆಳತಿ ಜೊತೆ ತೆಲುಗು ನಟ ಕಿರಣ್ ಅಬ್ಬಾವರಂ ಎಂಗೇಜ್‌ಮೆಂಟ್

Public TV
1 Min Read

ಟಾಲಿವುಡ್ ನಟ ಕಿರಣ್ ಅಬ್ಬಾವರಂ (Kiran Abbavaram) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಇದೀಗ ಉಂಗುರದ ಮುದ್ರೆ ಒತ್ತಲು ತೆಲುಗು ನಟ ಕಿರಣ್ ಅಬ್ಬಾವರಂ ರೆಡಿಯಾಗಿದ್ದಾರೆ. ಇದೇ ಮಾರ್ಚ್ 13ಕ್ಕೆ ನಟಿ ರಹಸ್ಯ (Rahasya Gorak) ಜೊತೆ ನಿಶ್ಚಿತಾರ್ಥಕ್ಕೆ ಡೇಟ್ ಫಿಕ್ಸ್ ಆಗಿದೆ. ಇದನ್ನೂ ಓದಿ:ಕಾರಿಗೆ ಕಾದು ಸುಸ್ತು, ಪತ್ನಿ ಜೊತೆ ಆಟೋದಲ್ಲಿ ಶ್ರೀಮುರಳಿ ಸವಾರಿ

ಕಿರುಚಿತ್ರಗಳಲ್ಲಿ ನಟಿಸುತ್ತಿದ್ದ ಕಿರಣ್ ಅವರು ‘ರಾಜಾ ವಾರು ರಾಣಿ ಗಾರು’ ಚಿತ್ರದಲ್ಲಿ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದರು. 2019ರಲ್ಲಿ ತೆರೆಕಂಡ ಈ ಸಿನಿಮಾದಿಂದ ಕಿರಣ್ ಲೈಫ್ ಬದಲಾಗಿತ್ತು. ಚಿತ್ರರಂಗಕ್ಕೆ ಉತ್ತಮ ಎಂಟ್ರಿ ಸಿಕ್ಕಿತು.  ಇದೇ ಸಿನಿಮಾದಲ್ಲಿ ಕಿರಣ್‌ಗೆ ನಾಯಕಿಯಾಗಿ ನಟಿಸಿದವರು ರಹಸ್ಯ ಗೋರಕ್. ರೀಲ್ ಲೈಫ್ ಹೀರೋಯಿನ್ ಜೊತೆ ರಿಯಲ್ ಆಗಿ ಮದುವೆಯಾಗುವುದಕ್ಕೆ ರೆಡಿಯಾಗಿದ್ದಾರೆ.

5 ವರ್ಷಗಳಿಂದ ಕಿರಣ್- ರಹಸ್ಯ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಸೀಕ್ರೆಟ್ ಆಗಿ ಇಟ್ಟಿದ್ದರು. ಈಗ ಮಾರ್ಚ್ 13ಕ್ಕೆ ಎಂಗೇಜ್‌ಮೆಂಟ್ ಮಾಡಿಕೊಳ್ತಿದ್ದಾರೆ. ಹೈದರಾಬಾದ್‌ನ ರೆಸಾರ್ಟ್‌ವೊಂದರಲ್ಲಿ ಸಂಜೆ 4 ಗಂಟೆಗೆ ನಿಶ್ಚಿತಾರ್ಥ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಲಿದ್ದಾರೆ.

ಎಸ್‌ಆರ್ ಕಲ್ಯಾಣಮಂಟಪಂ, ಸೆಬಾಸ್ಟಿನ್ ಪಿ ಸಿ 524, ಸಮ್ಮಾಥಮೆ, ನೇನು ಮೀಕು ಬಾಗ ಕಾವಲ್ಸಿನವಾಡಿನಿ, ವಿನರೋ ಭಾಗ್ಯಮು ವಿಷ್ಣು ಕಥಾ, ರೂಲ್ಸ್ ರಂಜನ್, ಮೀಟರ್ ಸಿನಿಮಾಗಳಲ್ಲಿ ಕಿರಣ್ ನಟಿಸಿದ್ದಾರೆ.

Share This Article