ಪಾರ್ಟಿ, ಪಬ್‌ಗೆ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರ್ತಿದ್ಳು: ಕಿರುತೆರೆ ನಟಿ ಶ್ರುತಿ ಪತಿಯ ಆರೋಪ

Public TV
1 Min Read

ಬೆಂಗಳೂರು: ಪಾರ್ಟಿ, ಪಬ್ ಅಂತಾ ಹೋಗಿ ಸಮಯವಲ್ಲದ ಸಮಯಕ್ಕೆ ಮನೆ ಬರ್ತಿದ್ಳು ಎಂದು ಕಿರುತೆರೆ ನಟಿ ಶ್ರುತಿ (Actress Shruti) ವಿರುದ್ಧ ಪತಿ (Husband) ಅಂಬರೀಶ್ ಪೊಲೀಸ್ ವಿಚಾರಣೆ ವೇಳೆ ಸಾಲು ಸಾಲು ಆರೋಪ ಮಾಡಿದ್ದಾರೆ.

ಮಂಜುಳಾ ಅಲಿಯಾಸ್ ಶ್ರುತಿಗೆ ಜು. 4ರಂದು ಚಾಕು ಇರಿದಿದ್ದ ಪತಿ ಅಂಬರೀಶ್‌ನನ್ನು ಬಂಧಿಸಿದ್ದ ಹನುಮಂತ ನಗರ ಪೊಲೀಸರು (Hanumantha nagara Police) ವಿಚಾರಣೆ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಪತಿ, ಪತ್ನಿಯ ಮೇಲೆ ಸಾಲು ಸಾಲು ಆರೋಪಗಳನ್ನ ಮಾಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

ನನ್ನ ಪತ್ನಿ ಮಂಜುಳಾಗೆ ಕುಟುಂಬದ ಜವಾಬ್ದಾರಿ ಇರಲಿಲ್ಲ. ಇಬ್ಬರು ಹೆಣ್ಣುಮಕ್ಕಳಿಗೆ ತಾಯಿ ಪ್ರೀತಿ ಅನ್ನೋದು ತೋರಿಸಿಲ್ಲ. ಪಾರ್ಟಿ ಪಬ್ ಅಂತ ಹೋಗಿ ಸಮಯವಲ್ಲದ ಸಮಯಕ್ಕೆ ಮನೆಗೆ ಬರುತ್ತಿದ್ದಳು. ಹೊರಗಡೆ ಹೋದರೆ ವಾರ, 15 ದಿನ ಮನೆಗೆ ಬರುತ್ತಿರಲಿಲ್ಲ. ಇತ್ತೀಚೆಗೆ ಕುಂಭಮೇಳಕ್ಕೆ ಅಂತ ಹೋಗಿ 15 ದಿನ ಮನೆಗೆ ಬಂದಿರಲಿಲ್ಲ. ಈ ವಿಚಾರವಾಗಿ ಗಲಾಟೆ ಆಗಿತ್ತು ಎಂದು ದೂರಿದ್ದಾರೆ. ಇದನ್ನೂ ಓದಿ: ಮಂಗಳವಾರ ಬಾಹ್ಯಾಕಾಶದಿಂದ ಭೂಮಿಗೆ ಮರಳಲಿದ್ದಾರೆ ಶುಭಾಂಶು ಶುಕ್ಲಾ

ನನ್ನ ಮೇಲೆ ಒಮ್ಮೆ ಶ್ರುತಿ ದೂರು ಕೂಡ ನೀಡಿದ್ದಳು. 25 ಲಕ್ಷ ರೂ. ಹಣ ಕೊಟ್ಟು ಅಪಾರ್ಟ್ಮೆಂಟ್‌ನಲ್ಲಿ ಮನೆ ಭೋಗ್ಯಕ್ಕೆ ಹಾಕಿಕೊಂಡಿದ್ದೆ. ಭೋಗ್ಯ ಕ್ಯಾನ್ಸಲ್ ಮಾಡಿ ಆ ದುಡ್ಡಿನೊಂದಿಗೆ ಮನೆ ಬಿಟ್ಟು ಹೋಗಲು ಶ್ರುತಿ ಪ್ಲಾನ್ ಕೂಡ ಮಾಡಿದ್ದಳು. ಹಾಗಾಗಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ಮೊನ್ನೆ ಕೂಡ ಗಲಾಟೆ ಆದಾಗ ರೂಡಾಗಿ ನಡೆದುಕೊಂಡಿದ್ದಕ್ಕೆ ದುಡುಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾಗಿ ಆರೋಪಿ ಪತಿ ಪೊಲೀಸರ ತನಿಖೆಯ ವೇಳೆ ಹೇಳಿಕೊಂಡಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Share This Article