ವರದಕ್ಷಿಣೆ ಕಿರುಕುಳ – ಮಗುವನ್ನು ಕೊಲೆಗೈದು ತಾಯಿ ಆತ್ಮಹತ್ಯೆ

Public TV
2 Min Read

ಹೈದರಾಬಾದ್: ವರದಕ್ಷಿಣೆ ಕಿರುಕುಳದ ಆರೋಪದ ಹಿನ್ನೆಲೆ ಮಹಿಳೆಯೊಬ್ಬರು ತಮ್ಮ 2 ವರ್ಷದ ಮಗುವನ್ನು ಹತ್ಯೆಗೈದಿದಲ್ಲದೇ ತಾವೂ ಕೂಡಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಾರ್ಕೆಟ್‍ಪಲ್ಲಿ ಮಂಡಲದಲ್ಲಿ ನಡೆದಿದೆ.

BRIBE

ಮಹಿಳೆಯನ್ನು ಲಾಸ್ಯ ಎಂದು ಗುರುತಿಸಲಾಗಿದ್ದು, ಮೊದಲು ತಮ್ಮ 2 ವರ್ಷದ ಮಗು ಸಾತ್ವಿಕ್‍ನನ್ನು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿ ಹತ್ಯೆಗೈದಿದ್ದಾರೆ. ನಂತರದಲ್ಲಿ ತಾವೂ ಕೂಡಾ ಅದೇ ಫ್ಯಾನ್‍ಗೆ ನೇಣು ಬಿಗಿದುಕೊಂಡಿದ್ದಾರೆ. ಘಟನೆಯನ್ನು ಗಮನಿಸಿದ ನೆರೆಹೊರೆಯವರು ಧಾವಿಸಿ ಅವರನ್ನು ಕೆಳಗಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಇಬ್ಬರೂ ಸಾವನ್ನಪ್ಪಿದ್ದರು ಎಂದು ನಾರ್ಕೆಟ್‍ಪಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ (ಸಿಐ) ಶಿವರಾಮಿ ರೆಡ್ಡಿ ತಿಳಿಸಿದ್ದಾರೆ.

ಲಾಸ್ಯ ಅವರು ನಾರ್ಕೆಟ್‍ಪಲ್ಲಿಯ ಔರವಾಣಿ ಗ್ರಾಮದ ರೈಲ್ವೆ ಕಾರ್ಮಿಕನಾದ ನರೇಶ್‍ನನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ಹಿಂದೆ ಲಾಸ್ಯ ಕುಟುಂಬ ವರದಕ್ಷಿಣೆಯಾಗಿ 35 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ಆರಂಭದಲ್ಲಿ ನರೇಶ್ ಕುಟುಂಬಕ್ಕೆ ಮಹಿಳೆಯ ಕುಟುಂಬವು 10 ಲಕ್ಷ ರೂ. ನೀಡಿದ್ದರು. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ರೈಲ್ವೆ ಕಾರ್ಮಿಕನಾಗಿ ನೇಮಕಗೊಂಡಿದ್ದ ನರೇಶ್, ರಾಜ್ಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ರಜೆ ಪಡೆದು ಹೈದರಾಬಾದ್‍ನಲ್ಲಿ ತಂಗಿದ್ದನು. ಇದನ್ನೂ ಓದಿ: 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

ನರೇಶ್‍ನಿಗೆ ರೈಲ್ವೆ ಕೆಲಸದಲ್ಲಿ ಆಸಕ್ತಿ ಇರಲಿಲ್ಲ. ಈ ವಿಷಯವನ್ನು ಮನೆಯವರಿಗೆ ತಿಳಿಸಿ ಉಳಿದ ವರದಕ್ಷಿಣೆ ಹಣವನ್ನು ಕೋಳಿ ವ್ಯಾಪಾರ ಮಾಡಲು ಕೇಳಿದ್ದಾನೆ. ಹಾಗಾಗಿ ಅಳಿಯನ ಒತ್ತಡಕ್ಕೆ ಮಣಿದು ಲಾಸ್ಯ ಕುಟುಂಬದವರು 20 ದಿನಗಳ ಹಿಂದೆ 20 ಲಕ್ಷ ರೂ. ನೀಡಿದ್ದರು. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ

ಹಣ ನೀಡಿದ್ದರೂ ನರೇಶ್ ತನ್ನ ಹೆಂಡತಿಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದ. ಹೀಗಾಗಿ ಮನನೊಂದ ಲಾಸ್ಯ ಅವರು ಭಾನುವಾರ, ಅವರ ಅತ್ತೆ ಮನೆಯಿಂದ ಹೊರಬಂದ ನಂತರ ಮೊದಲು ತನ್ನ ಎರಡು ವರ್ಷದ ಮಗನನ್ನು ನೇಣು ಹಾಕಿ ನಂತರ ತಾವೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು ಯಾರನ್ನೂ ಬಂಧಿಸಲಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *