ತೆಲಂಗಾಣ | ಬೇಕರಿಯಿಂದ ಖರೀದಿಸಿದ ಪಪ್ಸ್‌ನಲ್ಲಿ ಹಾವು ಪತ್ತೆ

Public TV
1 Min Read

ಹೈದರಾಬಾದ್: ಬೇಕರಿಯಿಂದ ಖರೀದಿಸಿದ್ದ ಕರ್ರಿ ಪಪ್ಸ್‌ನಲ್ಲಿ (Curry Pups) ಹಾವು ಪತ್ತೆಯಾಗಿರುವ ಘಟನೆ ತೆಲಂಗಾಣದ (Telangana) ಮೆಹಬೂಬ್ ನಗರದಲ್ಲಿ ನಡೆದಿದೆ.ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ | ರಾಜ್ಯಾದ್ಯಂತ ಪ್ರತಿಭಟನೆ – ವಿಧಾನಸೌಧದಲ್ಲಿ ಹೆಣ ಇದೆ ಅಂದ್ರೆ ಅಗೆಯುತ್ತಾರಾ? ಭಕ್ತರ ಆಕ್ರೋಶ

ಶ್ರೀಶೈಲ ಎಂಬ ಮಹಿಳೆ ಜಡ್ಚರ್ಲಾ ಪುರಸಭೆಯಲ್ಲಿರುವ ಅಯ್ಯಂಗಾರ್ ಬೇಕರಿಯಿಂದ ಎಗ್ ಪಪ್ಸ್ (Egg Pups) ಹಾಗೂ ಕರ‍್ರಿ ಪಪ್ಸ್ ಖರೀದಿಸಿದ್ದರು. ಅಲ್ಲಿಂದ ಮನೆಗೆ ಬಂದ ಮಹಿಳೆ ತಮ್ಮ ಮಕ್ಕಳೊಂದಿಗೆ ತಿನ್ನಲು ಕುಳಿತರು. ಈ ವೇಳೆ ರ‍್ರಿ ಪಪ್ಸ್ ತೆರೆದಾಗ ಅದರಲ್ಲಿ ಹಾವು ಇರುವುದು ಪತ್ತೆಯಾಗಿದೆ.

ಕೂಡಲೇ ಮಹಿಳೆ ಈ ಕುರಿತು ಬೇಕರಿ ಮಾಲೀಕರಿಗೆ ಮಾಹಿತಿ ತಿಳಿಸಿದ್ದು, ಅವರು ಬೇಜವ್ದಾರಿಯಿಂದ ವರ್ತಿಸಿದ್ದಾರೆ. ಜೊತೆಗೆ ಇಲ್ಲಸಲ್ಲದ ಕಾರಣ ಹೇಳಿದರು. ಇದರಿಂದ ಕೋಪಗೊಂಡ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಈ ಕುರಿತು ಜಡ್ಚರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಎಲ್‌ಓಸಿಯಲ್ಲಿ ಪಾಕ್ ಒಳನುಸುಳುಕೋರರ ತಡೆದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಹುತಾತ್ಮ

Share This Article