ಅತ್ಯಾಚಾರವೆಸಗಿ ಹತ್ಯೆಗೈದು ಶವಕ್ಕೆ ಲೈಂಗಿಕ ಕಿರುಕುಳ ಕೊಟ್ಟ

Public TV
1 Min Read

ಹೈದರಾಬಾದ್: ಯುವಕನೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿ ನಂತರ ಹಲ್ಲೆ ನಡೆಸಿ ಹತ್ಯೆಗೈದು, ಆಕೆಯ ಶವಕ್ಕೆ ಲೈಂಗಿಕ ಕಿರುಕುಳ ನೀಡಿರುವ ಭಯಾನಕ ಘಟನೆ ತೆಲಂಗಾಣದಲ್ಲಿ ನಡೆದಿದೆ.

RAPE

ಆರೋಪಿ ಕಟ್ಟಡ ನಿರ್ಮಾಣ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಈತನ ಮನೆಯ ಸಮೀಪದಲ್ಲಿಯೇ ಸಂತ್ರಸ್ತ ಮಹಿಳೆ ಗೋಡೌನ್‍ವೊಂದರಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ ಪತಿ ಹತ್ತಿರದ ಕಾಲೇಜೊಂದರಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಪತಿ ಕೆಲಸಕ್ಕೆ ಹೋದಾಗ ಹಲವಾರು ಗಂಟೆಗಳ ಕಾಲ ಮಹಿಳೆಯೊಬ್ಬಳೆ ಒಬ್ಬಂಟಿಯಾಗಿ ಮನೆಯಲ್ಲಿರುವುದನ್ನು ಗಮನಿಸಿದ ಆರೋಪಿ, ಸೋಮವಾರ ಗೋಡೌನ್‍ಗೆ ನುಗ್ಗಿ ಆಕೆಗೆ ಜೀವ ಬೆದರಿಕೆಯೊಡ್ಡಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಒಂದು ಗಂಟೆಯೊಳಗೆ ಆಕೆಯ ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ

ಈ ಕುರಿತಂತೆ ಮಾತನಾಡಿದ ಚೌಟುಪ್ಪಲ್ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಉದಯ್ ರೆಡ್ಡಿ ಅವರು, ಆರೋಪಿ ಮಹಿಳೆಯ ತಲೆಗೆ ಮೊಂಡಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿ ಶವದ ಮೇಲೆ ಪದೇ, ಪದೇ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಆಕೆಯ ಚಿನ್ನಾಭರಣಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ನಂತರ ಸಂತ್ರಸ್ತೆ ಪತಿ ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ, ಕೊಲೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೆವು. ಇದನ್ನೂ ಓದಿ: ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ

ಬುಧವಾರ ಘಟನಾ ಸ್ಥಳದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಮಲ್ಕಾಪುರ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿಲಾಗಿದ್ದು, ಆತನ ಬಳಿಯಿದ್ದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *