RRR ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ

Public TV
1 Min Read

ತೆಲಂಗಾಣ: ಶೀಘ್ರವೇ ತೆರೆಗೆ ಬರಲಿರುವ ರಾಜಮೌಳಿ ನಿರ್ದೇಶನದ, ನಟರಾದ ರಾಮ್‍ಚರಣ್ ತೇಜ, ಜ್ಯೂನಿಯರ್ ಎನ್‍ಟಿಆರ್ ಅಭಿನಯದ ಆರ್‍ಆರ್‍ಆರ್ ಸಿನಿಮಾ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ತೆಲಂಗಾಣ ಹೈಕೋರ್ಟ್ ವಜಾಗೊಳಿಸಿದೆ.

ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಭಿನಂದ್ ಕುಮಾರ್ ಶಾವಿಳಿ ಅವರಿದ್ದ ಪೀಠ ವಜಾಗೊಳಿಸಿದೆ. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್

ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರು ಅಂದಿನ ಬ್ರಿಟಿಷ್ ಸರ್ಕಾರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು RRR ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೆ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು, ಅವರ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‍ಸಿ) ನಿರ್ದೇಶಿಸಬೇಕು ಎಂದು ವಿದ್ಯಾರ್ಥಿನಿ ಸೌಮ್ಯ ಅರ್ಜಿ ಸಲ್ಲಿಸಿದ್ದರು.

ಸೆನ್ಸಾರ್ ಪ್ರಮಾಣ ಪತ್ರದ ಸಿಂಧುತ್ವವು ಸವಾಲಿಗೆ ಒಳಪಡದಿರುವ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಪರಿಹಾರ ನೀಡಲು ಯಾವುದೇ ಕಾರಣ ಕಂಡುಬರುತ್ತಿಲ್ಲ. ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಅಫಿಡವಿಟ್ ಸಲ್ಲಿಸಿದ್ದ ಸಿಬಿಎಫ್‍ಸಿ ಸಿನಿಮಾ ಕಾಲ್ಪನಿಕ ಕೃತಿಯಾಗಿರುವುದರಿಂದ ಕೆಲ ಸಿನಿಮಾಗಳಿಗೆ ಸ್ವಾತಂತ್ರ್ಯವನ್ನು ಅನುಮತಿಸಲಾಗಿದೆ. ಅರ್ಜಿದಾರರ ವಾದವನ್ನು ಒಪ್ಪಿದರೂ ರಾಜು ಮತ್ತು ಕೊಮರಂ ಭೀಮ್ ಅವರನ್ನು ದೊಡ್ಡ ದೇಶಭಕ್ತರಾಗಿಯೇ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ:  ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

ಇತ್ತೀಚೆಗೆ ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ `ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್, ಹಿತನ್ ಧೀರಜ್‍ಲಾಲ್ ಮೆಹ್ತಾ ಮತ್ತು ಬನ್ಸಾಲಿ ಪ್ರೊಡಕ್ಷನ್ ಚಿತ್ರದಲ್ಲಿ ನೀಡಿದ್ದ ತೀರ್ಪನ್ನು ಅವಲಂಬಿಸಿ ನ್ಯಾಯಾಲಯ ಈ ಆದೇಶ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *