‘ರಂಗಬಲಿ’ ಸಕ್ಸಸ್ ಮೀಟ್‌ನಿಂದ ನಾಗ ಶೌರ್ಯ ವಾಕ್ ಔಟ್

Public TV
2 Min Read

ಟಾಲಿವುಡ್ (Tollywood) ನಟ, ಕರ್ನಾಟಕದ ಅಳಿಯ ನಾಗ ಶೌರ್ಯ (Naga Shaurya) ಅವರು ಇದೀಗ ವಿವಾದದಿಂದ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೇ ನಾಗ ಶೌರ್ಯ ನಟನೆಯ ‘ರಂಗಬಲಿ’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಚಿತ್ರ ಹಿಟ್ ಆಗಿರುವ ಬೆನ್ನಲ್ಲೇ ಸಕ್ಸಸ್ ಮೀಟ್ ಆಯೋಜಿಸಿದ್ದರು. ಈಗ ಕಾರ್ಯಕ್ರಮದ ಮಧ್ಯೆಯೇ ನಟ ನಾಗ ಶೌರ್ಯ ಹೊರನಡೆದಿದ್ದಾರೆ.

ನಾಗ ಶೌರ್ಯ, ಯುಕ್ತಿ ನಟನೆಯ ‘ರಂಗಬಲಿ’ (Rangabali) ಸಿನಿಮಾ ಜುಲೈ 7ರಂದು ರಿಲೀಸ್ ಆಗಿತ್ತು. ಸಿನಿಮಾದ ಟೀಸರ್, ಟ್ರೈಲರ್ ಮೂಲಕ ‘ರಂಗಬಲಿ’ ಗಮನ ಸೆಳೆದಿತ್ತು. ಈಗ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಸಂಭ್ರಮ ಏರ್ಪಡಿಸಿತ್ತು. ಹಾಗೆಯೇ ವಾಹಿನಿಯ ಸಿನಿಮಾ ಪತ್ರಕರ್ತರಿಗೂ ಆಹ್ವಾನ ನೀಡಿತ್ತು. ಸಿನಿಮಾ ವಿಶ್ಲೇಷಕರೊಬ್ಬರು, ಪ್ರಶ್ನೆ ಕೇಳುವ ಸಂದರ್ಭ ಬಂದಾಗ ಸಿನಿಮಾದಲ್ಲಿದ್ದ ಸಮಸ್ಯೆಯೊಂದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಾರ್ಯಕ್ರಮವನ್ನ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ:ಪ್ರೇಕ್ಷಕರ ಗಮನ ಸೆಳೆಯುತ್ತಿದೆ ‘ಆಡೇ ನಮ್ Godʼ ಟೀಸರ್

ಕಥೆ ನಡೆಯುವ ಕಾಲವನ್ನು ಸಿನಿಮಾದಲ್ಲಿ ತಪ್ಪಾಗಿ ತೋರಿಸಿರುವ ಬಗ್ಗೆ ಸಿನಿಮಾ ವಿಶ್ಲೇಷಕರು ಪ್ರಶ್ನೆ ಮಾಡಿದರು. ಅವರ ಪ್ರಶ್ನೆಗೆ ಉತ್ತರ ನೀಡಿದ ನಿರ್ದೇಶಕ ಪವನ್ ಬಸಮಸೆಟ್ಟಿ ಸ್ಪಷ್ಟನೆ ನೀಡಿದರು. ಆದರೆ ನಿರ್ದೇಶಕನ ಉತ್ತರದಿಂದ ತೃಪ್ತಿಯಾಗದ ಸಿನಿಮಾ ವಿಶ್ಲೇಷಕ, ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ತಾಳ್ಮೆ ಕಳೆದುಕೊಂಡು ಮೈಕ್ ತೆಗೆದುಕೊಂಡ ರಂಗಬಲಿ ನಾಯಕ ನಾಗ ಶೌರ್ಯ, ಸಿನಿಮಾದಲ್ಲಿ ಪ್ರತಿ ನಿಮಿಷದ ಮಾಹಿತಿ ನೀಡಬೇಕು ಎಂದರೆ ಪ್ರತಿ ಸಿನಿಮಾವನ್ನು 24 ಗಂಟೆಗಳ ಕಾಲ ಪ್ರದರ್ಶಿಸಬೇಕಾಗುತ್ತದೆ. ‘ಬಾಹುಬಲಿ’ ಚಿತ್ರದಲ್ಲಿ 20-30 ವರ್ಷಗಳಲ್ಲಿ ನಡೆಯುವ ಕಥೆ ಆ ಸಿನಿಮಾದ ಪ್ರತಿ ಡಿಟೈಲ್ಸ್ ನೀಡಲು ಸಾಧ್ಯವೇ? ಹಾಗೆಯೇ ಕೆಲವು ವಿಷಯಗಳನ್ನು ನಂಬಿ ಅಲ್ಲಿಯೇ ಕೈಬಿಡಬೇಕು ಅದನ್ನು ಹೀಗೆ ಎಳೆದಾಡಬಾರದು ಎಂದು ಸಿಟ್ಟಿನಿಂದ ನಟ ಹೊರನಡೆದಿದ್ದಾರೆ. ಸಿನಿಮಾ ವಿಶ್ಲೇಷಕರಿಗೆ ಕ್ಲಾಸ್ ತೆಗೆದುಕೊಂಡ ನಂತರ ಮೈಕ್ ಅನ್ನು ನಿರೂಪಕಿಯ ಕೈಗೆ ಕೊಟ್ಟು ನಾಗ ಶೌರ್ಯಾ ಎದ್ದು ಹೋಗುತ್ತಿದ್ದಂತೆ ಚಿತ್ರದ ನಾಯಕಿ, ಚಿತ್ರತಂಡ ಸಹ ಎದ್ದು ಹೋಗಿದ್ದಾರೆ. ಕಾರ್ಯಕ್ರಮದ ಮಧ್ಯೆ ನಾಗ ಶೌರ್ಯ ಸಿಟ್ಟಾಗಿ ಎದ್ದು ಹೋಗಿದ್ದರ ಬಗ್ಗೆ ಸಿನಿಮಾ ವಿಶ್ಲೇಷಕರು ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ ಬೆಂಗಳೂರಿನಲ್ಲಿ ಮದುವೆಯಾದರು. ಕುಂದಾಪುರದ ಯುವತಿ ಜೊತೆ ಪ್ರೀತಿಸಿ ಗುರುಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದರು. ಕನ್ನಡದ ಯುವ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರ ಸಹೋದರಿ ಅನುಷಾ ಜೊತೆ ಹಸೆಮಣೆ ಏರಿದ್ದರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್