ಮೋದಿ ಮೆಚ್ಚಿದ ಗಾಯಕಿಯನ್ನು ಮದ್ವೆಯಾಗಲಿದ್ದಾರೆ ತೇಜಸ್ವಿ ಸೂರ್ಯ

Public TV
1 Min Read

ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಶೀಘ್ರವೇ ಹಸೆಮಣೆ ಏರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚಿದ ಗಾಯಕಿ ಜೊತೆ ಸಂಸದ ತೇಜಸ್ವಿ ಸೂರ್ಯಗೆ ಮದುವೆ ಮಾತುಕತೆ ನಡೆಯುತ್ತಿದೆ.

ರಾಮಮಂದಿರ (Rammandira) ಉದ್ಘಾಟನೆ ಸಂದರ್ಭದಲ್ಲಿ ಪೂಜಿಸಲೆಂದೇ ಹೂಗಳ ತಂದೆ ಹಾಡುವ ಮೂಲಕ ಮೋದಿಯವರ ಮೆಚ್ಚುಗೆಗೆ ಪಾತ್ರರಾಗಿದ್ದ ಗಾಯಕಿ ಸಿವಶ್ರೀ ಸ್ಕಂದ ಪ್ರಸಾದ್ (Sivasri Skandaprasad) ಅವರನ್ನು ತೇಜಸ್ವಿ ಸೂರ್ಯ ಮದುವೆ ಆಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.  ಇದನ್ನೂ ಓದಿ: ನ್ಯೂ ಇಯರ್‌ಗೆ ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಏನದು?

 

ಸಿವಶ್ರೀ ಅವರು ಚೆನ್ನೈ (Chennai) ಮೂಲದ ಹೆಸರಾಂತ ಗಾಯಕಿ, ಭರತನಾಟ್ಯ ಪ್ರವೀಣೆ ಹಾಗೂ ಬಿಟೆಕ್ ಪದವೀಧರೆಯಾಗಿದ್ದಾರೆ. ಸದ್ಯ ಎರಡೂ ಕುಟುಂಬಗಳ ಮಧ್ಯೆ ವಿವಾಹಕ್ಕೆ ಮಾತುಕತೆ ನಡೆಯುತ್ತಿದೆ. ತೇಜಸ್ವಿ ಹಾಗೂ ಸಿವಶ್ರೀ ಸಹ ಈಗಾಗಲೇ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಅಂದುಕೊಂಡಂತೆ‌ ಎಲ್ಲವೂ ನಡೆದರೆ ಇನ್ನು ನಾಲ್ಕೈದು ತಿಂಗಳಲ್ಲಿ ಸಿವಶ್ರೀ ಮತ್ತು ತೇಜಸ್ವಿ ಜೊತೆಯಾಗಿ ಸಪ್ತಪದಿ‌ ತುಳಿಯಲಿದ್ದಾರೆ.

ಇಬ್ಬರ ಜಾತಕ ಕೂಡ ಕೂಡಿ ಬಂದಿದೆ ಎನ್ನಲಾಗಿದೆ. ಸದ್ಯ ಮಾತುಕತೆ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲವೂ ತೀರ್ಮಾನ ಆಗಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ವೇಳೆ ಸಿವಶ್ರೀ ಸ್ಕಂದಪ್ರಸಾದ್ ಹಾಡಿದ್ದ `ಪೂಜಿಸಲೆಂದೇ ಹೂಗಳ ತಂದೆ’ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದರು.

 

Share This Article