ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ

Public TV
1 Min Read

ಶಿವಮೊಗ್ಗ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದರು.

ಶಿವಮೊಗ್ಗದಲ್ಲಿ ನಡೆದ ಯುವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ತೇಜಸ್ವಿಸೂರ್ಯ (Tejasvi Surya), ಕಾಂಗ್ರೆಸ್ ಶಂಕುಸ್ಥಾಪನೆ ಮಾಡಿದ್ದ ಒಂದೇ ಒಂದು ಯೋಜನೆಗಳು ಅವರು ಈವರೆಗೂ ಉದ್ಘಾಟಿಸಿಲ್ಲ. ಅಭಿವೃದ್ಧಿ ಎಂದರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ (Bharat Jodo Yatra) ಹೆಸರಿನಲ್ಲಿ ವಾಕಿಂಗ್ ಮಾಡಿದ ಹಾಗಲ್ಲ. ಅಭಿವೃದ್ಧಿ ಎಂದರೆ ಪ್ರಧಾನಿ ಮೋದಿ ಮಾಡುತ್ತಿರುವುದಾಗಿದೆ ಎಂದರು. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ

ನಮ್ಮ ಅನೇಕ ಕಾರ್ಯಕರ್ತರ ಹತ್ಯೆ ಹಾಗೂ ಅವರ ಮೇಲೆ ಹಲ್ಲೆಗಳು ನಡೆದಿವೆ. 738 ಪುಟಗಳ ವರದಿ ಸಿದ್ಧಪಡಿಸಿ ಹರ್ಷ ಹತ್ಯೆ ಮಾಡಿದವರು ಜೈಲಿನಿಂದ ಹೊರಗೆ ಬರಬಾರದೆಂದು ಕೆಲಸ ಮಾಡಿದ್ದೇವೆ. ಅದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಹರ್ಷ ಹತ್ಯೆ ಮಾಡಿದವರು ಈವರೆಗೆ ಹೊರಗೆ ಬರುತ್ತಿದ್ದರು. ಇವಿಎಂ ಯಂತ್ರ ಸರಿಯಿಲ್ಲ ಎಂದು ಈಗ ಕಾಂಗ್ರೆಸ್‍ನವರು ಶುರು ಮಾಡಿಕೊಂಡಿದ್ದಾರೆ. ಆದರೆ ಅವರ ಸೋಲಾಗುತ್ತಿರುವುದು ಇವಿಎಂ (EVM) ಮಿಷನ್ ನಿಂದಲ್ಲ ಅವರ ಕಾರ್ಯಕರ್ತರಿಂದಾಗಿ ಅವರ ಸೋಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗಕ್ಕೆ (Shivamogga) ಬಂದಾಗಲೆಲ್ಲಾ ಖುಷಿಯಾಗುತ್ತೆ. ಇಲ್ಲಿನ ಯುವ ಮೋರ್ಚಾ ಸಂಘಟನೆ ಸಧೃಢವಾಗಿದೆ. ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಪಕ್ಷಗಳ ಕಚೇರಿಗಳಿಗೆ ಈಗ ಸುಣ್ಣ, ಬಣ್ಣ ಬಳಿಯುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬ್ಯಾನರ್, ಬಂಟಿಂಗ್ಸ್ ಹಾಕಿಸುತ್ತಿದ್ದಾರೆ. ಚುನಾವಣೆ ಬಂದಾಗ ಪಂಚರತ್ನ ಯಾತ್ರೆ ಬರುವ ಪಕ್ಷ ನಮ್ಮದಲ್ಲ. ನಮ್ಮದು ಪಂಚ ವರ್ಷಗಳು ಕೂಡ ಸಧೃಢ ಎಂಬುದನ್ನು ತೋರಿಸಿ ಕೊಟ್ಟಿದೆ. ಕೋವಿಡ್ ಇರಲಿ ಬಿಡಲಿ ನಮ್ಮ ಕಚೇರಿ ಎಲ್ಲರಿಗೂ ತೆರದಿದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್

Share This Article
Leave a Comment

Leave a Reply

Your email address will not be published. Required fields are marked *