ಟನಲ್ ರೋಡ್ ಯೋಜನೆ ಬೇಡ: ತೇಜಸ್ವಿ ಸೂರ್ಯ

Public TV
1 Min Read

– ಅರ್ಧ ಗಂಟೆ ಸಮಯ ಕೊಟ್ಟರೆ ವಿವರಿಸುತ್ತೇನೆ ಎಂದ ಬಿಜೆಪಿ ಸಂಸದ

ಬೆಂಗಳೂರು: ಟನಲ್ ರೋಡ್ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸಂಸದನನ್ನು ಖಾಲಿ ಡಬ್ಬ, ಅಮಾವಸ್ಯೆ ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಅವರು ಹಿರಿಯ ರಾಜಕಾರಣಿ. ಅನುಭವ ಇದ್ದವ್ರು. ವೈಯಕ್ತಿಕ ಟೀಕೆ ಮಾಡೋದಿಲ್ಲ ಎಂದರು.

ಡಿಸಿಎಂ ಅವರನ್ನು ಭೇಟಿ ಮಾಡಲು ಅವರ ಕಚೇರಿಗೆ ಸಮಯ ಕೇಳಿದ್ದೇನೆ. ಅರ್ಧ ಗಂಟೆ ಸಮಯ ಕೊಟ್ಟರೆ ಟನಲ್ ಯೋಜನೆ ಯಾಕೆ ಬೇಡ? ಇದರಿಂದ ಏನು ಸಮಸ್ಯೆ ಆಗುತ್ತದೆ ಎನ್ನುವುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ವಿವರಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

ಈ‌ ಯೋಜನೆಯ ಬಗ್ಗೆ ಡಿಸಿಎಂ ಅವರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಅನಿಸುತ್ತೆ. ಈ ಯೋಜನೆಯಿಂದ ಸ್ಯಾಂಕಿ ಕೆರೆ, ಲಾಲ್ ಬಾಗ್ ಪ್ರದೇಶಕ್ಕೆ ಹಾನಿಯಾಗಲಿದೆ. ಮಾಡೇ ಮಾಡ್ತೀನಿ ಅಂತ ಜಿದ್ದಿಗೆ ಬೀಳೋದು ತಪ್ಪು. ಟನಲ್ ಯೋಜನೆ ಬೇಡ ಅಂತ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಲೇಖಕ, ನಟ ಪ್ರಕಾಶ್ ಬೆಳವಾಡಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಮಂಗಳವಾರ ಬರಲಿದ್ದು, ನಾನೇ ವಾದ ಮಂಡಿಸಲಿದ್ದೇನೆ ಎಂದು ಹೇಳಿದರು.

Share This Article