ಬಿಹಾರ ವಿಧಾನಸಭೆಯ ವಿಪಕ್ಷ ನಾಯಕನಾಗಿ ತೇಜಸ್ವಿ ಯಾದವ್ ಆಯ್ಕೆ

Public TV
1 Min Read

ಪಾಟ್ನಾ: ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಘೋಪುರ್‌ನ ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್ ಆಯ್ಕೆಯಾಗಿದ್ದಾರೆ.

ಯಾದವ್ ಅವರು ತಮ್ಮ ಪಕ್ಷದ ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಸಭೆ ಸೇರಿ ಪಕ್ಷದ ಭವಿಷ್ಯದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಕಳಪೆ ಪ್ರದರ್ಶನದ ಬಗ್ಗೆಯೂ ಚರ್ಚೆಯಾಗಲಿದೆ. ಆರ್‌ಜೆಡಿ ಭವಿಷ್ಯದ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಬಿಹಾರ ವಿಧಾನಸಭೆಗೆ 2 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಭಾರಿ ಹಿನ್ನಡೆ ಅನುಭವಿಸಿತು. ಎನ್‌ಡಿಎ ಭರ್ಜರಿ ಜಯ ಸಾಧಿಸಿತು. 143 ಸ್ಥಾನಗಳಲ್ಲಿ ಕೇವಲ 25 ಸ್ಥಾನಗಳನ್ನು ಆರ್‌ಜೆಡಿ ಗೆದ್ದಿದೆ.

ಬಿಹಾರ ಚುನಾವಣೆ ಸೋಲಿನ ಬೆನ್ನಲ್ಲೇ ತೇಜಸ್ವಿ ಯಾದವ್‌ ಕುಟುಂಬದಲ್ಲಿ ಆಂತರಿಕ ಕಲಹ ಏರ್ಪಟ್ಟಿದೆ. ಪಕ್ಷ ಮತ್ತು ಕುಟುಂಬವನ್ನು ತೊರೆಯುವುದಾಗಿ ತೇಜಸ್ವಿ ಯಾದವ್‌ ಸಹೋದರಿ ರೋಹಿಣಿ ಆಚಾರ್ಯ ಘೋಷಿಸಿದ್ದಾರೆ. ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ.

Share This Article