ತೇಜ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

Public TV
1 Min Read

ನುಮಾನ್’ ಮೂಲಕ ಸಾಕಷ್ಟು ಜನಪ್ರಿಯರಾಗಿರುವ ಟಾಲಿವುಡ್ ನಟ ತೇಜ ಸಜ್ಜಾ (Teja Sajja) ನಟನೆಯ ಬಹು ನಿರೀಕ್ಷಿತ ಸಿನಿಮಾ ಮಿರಾಯ್. ಹನುಮಾನ್ ಚಿತ್ರದ ಬಳಿಕ ತೇಜ ಒಪ್ಪಿಕೊಂಡಿರುವ ಮತ್ತೊಂದು ಸೂಪರ್ ಹೀರೋ ಚಿತ್ರ ಇದಾಗಿದೆ. ಸ್ಯಾಂಪಲ್ಸ್ ಮೂಲಕ ನಿರೀಕ್ಷೆ ಹೆಚ್ಚಿರುವ ಮಿರಾಯ್ (Mirai) ಸಿನಿಮಾ ಸೆಪ್ಟೆಂಬರ್ 12ರಂದು ತೆರೆಗೆ ಬರ್ತಿದೆ.

ಮಿರಾಯ್ ಸಿನಿಮಾದ ಥಿಯೇಟರಿಕಲ್ ಟ್ರೇಲರ್ ನ್ನು ಚಿತ್ರತಂಡ ನಾಳೆ ರಿಲೀಸ್ ಮಾಡಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡಿದೆ. ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನಾಗಿ ಮತ್ತು ರಿತಿಕಾ ನಾಯಕ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸೂಪರ್ ಯೋಧಾ ಪಾತ್ರದಲ್ಲಿ ತೇಜ ಸಜ್ಜಾ ಅಭಿನಯಿಸಿದ್ದಾರೆ. ಇದನ್ನೂ ಓದಿ: ಗುರುವಾಯೂರು ದೇವಾಲಯದ ಕೊಳದಲ್ಲಿ ಕಾಲು ತೊಳೆದ ಜಾಸ್ಮಿನ್ ಜಾಫರ್ ಭುಗಿಲೆದ್ದ ಆಕ್ರೋಶ

ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮಿರಾಯ್ಗೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ವಿಶೇಷವಾಗಿ ಈ ಚಿತ್ರ 2D ಮತ್ತು 3D ಫಾರ್ಮಾಟ್ನಲ್ಲಿ ರಿಲೀಸ್ ಆಗಲಿದೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ.

Share This Article