ಬೆಂಗಳೂರು | ಸೂಟ್‌ಕೇಸ್‌ನಲ್ಲಿ ಬಾಲಕಿ ಶವ ಪತ್ತೆ ಪ್ರಕರಣ – ಬಿಹಾರದಲ್ಲಿ 7 ಆರೋಪಿಗಳು ಅರೆಸ್ಟ್‌

Public TV
1 Min Read

ಪಾಟ್ನಾ/ ಬೆಂಗಳೂರು: ಚಂದಾಪುರ ರೈಲ್ವೆ ಬ್ರಿಡ್ಜ್‌ (Chandapura Railway Bridge) ಬಳಿ ಬಾಲಕಿಯೊಬ್ಬಳನ್ನು ಹತ್ಯೆಗೈದು, ಸೂಟ್‌ಕೇಸ್‌ನಲ್ಲಿ (Suitcase) ಶವ ತುಂಬಿ ಎಸೆದಿದ್ದ 7 ಜನ ಆರೋಪಿಗಳನ್ನು ಬೆಂಗಳೂರು (Bengaluru) ಪೊಲೀಸರು ಬಿಹಾರದಲ್ಲಿ (Bihar) ಬಂಧಿಸಿದ್ದಾರೆ.

ಬಂಧಿತ ಎಲ್ಲಾ ಆರೋಪಿಗಳು ಬಿಹಾರದ ನವಾಡ ಜಿಲ್ಲೆಯವರಾಗಿದ್ದಾರೆ. ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಸೂರ್ಯನಗರ ಪೊಲೀಸರು ಬಿಹಾರದಿಂದ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ. 7 ರಲ್ಲಿ ಮೂವರ ವಿವರ ಲಭ್ಯವಾಗಿದ್ದು, ಅವರನ್ನು ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ. ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Anekal | ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ

ಈ ಪ್ರಕರಣ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಘಟನೆ ನಮ್ಮ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ನಮಗೆ ಸಂಬಂಧಿಸಿರಬಹುದು ಎಂಬ ಕಾರಣಕ್ಕೆ ನಾವು ಭಾಗಿಯಾಗಿದ್ದೇವೆ. ಸೂಟ್‌ಕೇಸ್‌ನಲ್ಲಿ ಶವ ಮಾತ್ರ ಇತ್ತು. ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 21 ರಂದು ಚಂದಾಪುರ ರೈಲ್ವೆ ಬ್ರಿಡ್ಜ್‌ ಬಳಿ ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಹತ್ಯೆಯಾದ ಬಾಲಕಿಯನ್ನು ರೀಮಾ (17) ಎಂದು ಗುರುತಿಸಲಾಗಿತ್ತು. ಪ್ರಾಥಾಮಿಕ ತನಿಖೆಯಲ್ಲಿ, ಬೇರೆಡೆ ಕೊಲೆ ಮಾಡಿ, ಶವ ಇಲ್ಲಿ ಎಸೆಯಲಾಗಿದೆ ಎಂದು ತಿಳಿದು ಬಂದಿತ್ತು. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇದನ್ನೂ ಓದಿ: ಪ್ರಿಯರಕನೊಂದಿಗೆ ಚಕ್ಕಂದವಾಡ್ತಾ ಸಿಕ್ಕಿಬಿದ್ದ ಪತ್ನಿ – ಆಕೆಯನ್ನ ಕೊಂದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಪತಿ

Share This Article