ಬರ್ತ್‍ಡೇ ಪಾರ್ಟಿಯಲ್ಲಿ ಸಹಪಾಠಿಗಳೇ ಗ್ಯಾಂಗ್‍ರೇಪ್ ಎಸಗಿ ವಿಡಿಯೋ ಮಾಡಿದ್ರು!

Public TV
1 Min Read

ಹೈದ್ರಾಬಾದ್: ಇಲ್ಲಿನ ಖಮ್ಮಾಮ್ ನಗರದಲ್ಲಿ ಬರ್ತ್‍ಡೇ ಪಾರ್ಟಿಗೆಂದು ಹೋಗಿದ್ದ ಯುವತಿಯ ಮೇಲೆ ಆಕೆಯ ನಾಲ್ವರು ಸಹಪಾಠಿಗಳು ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ಮಾಡಿದ ಆರೋಪವೊಂದು ಕೇಳಿಬಂದಿದೆ.

17 ವರ್ಷದ ಯುವತಿ ಈ ಆರೋಪವನ್ನು ಮಾಡಿದ್ದು, ಈ ಘಟನೆ ಭಾನುವಾರ ನಡೆದಿದೆ ಅಂತಾ ಪೊಲಿಸರು ತಿಳಿಸಿದ್ದಾರೆ.

ಏನಿದು ಘಟನೆ?: ಬರ್ತ್‍ಟೇ ಪಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ನಾಲ್ವರು ಸಹಪಾಠಿಗಳು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಅಂತಾ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯಾಗಿರೋ ಯುವತಿ ಖಮ್ಮಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಸಾಮೂಹಿಕ ಅತ್ಯಾಚಾರದ ವಿಡಿಯೋ ಕೂಡ ಮಾಡಿದ್ದಾರೆ. ಬಳಿಕ ಈ ಬಗ್ಗೆ ಹೊರಗಡೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ ಅಂತಾ ಯುವತಿ ದೂರಿನಲ್ಲಿ ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವತಿಯ ದೂರಿನ ಆಧಾರದ ಮೇಲೆ ನಾಲ್ವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *