ಬಾಗಲಕೋಟೆ: ಅಪ್ರಾಪ್ತೆಯ (Minor) ಮೇಲೆ ಅಪ್ರಾಪ್ತನೊಬ್ಬ ಅತ್ಯಾಚಾರ (Rape) ಎಸಗಿದ ಘಟನೆ ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದು (Pregnant) ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.
ಇಬ್ಬರು ಈ ಹಿಂದೆ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಅಪ್ರಾಪ್ತೆ 7ನೇ ತರಗತಿಯಲ್ಲಿ ಬಾಲಕ 8ನೇ ತರಗತಿಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ.
ಸದ್ಯ ಅಪ್ರಾಪ್ತನಿಗೆ 17 ವರ್ಷವಾಗಿದ್ದು ಅಪ್ರಾಪ್ತೆಗೆ 16 ವರ್ಷವಾಗಿದೆ. ಅಪ್ರಾಪ್ತೆಯ ತಂದೆ ನೀಡಿದ ದೂರಿನ್ವಯ ಅಪ್ರಾಪ್ತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.