ಹಳದಿ ಮಾರ್ಗದ 1 ರೈಲಿನಲ್ಲಿ ತಾಂತ್ರಿಕ ಸಮಸ್ಯೆ – 19 ನಿಮಿಷದ ಅಂತರದಲ್ಲಿ ಸಂಚಾರ

0 Min Read

ಬೆಂಗಳೂರು: ತಾಂತ್ರಿಕ ಸಮಸ್ಯೆಯಿಂದ ನಮ್ಮ ಮೆಟ್ರೋದ (Namma Metro) ಹಳದಿ ಮಾರ್ಗದಲ್ಲಿ(Yellow Line) ಸಂಚರಿಸುವ ಒಂದು ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಇಂದು ಸಂಜೆ 4:45 ರಿಂದ ಒಂದು ರೈಲಿನ ಸಂಚಾರ ಸ್ಥಗಿತಗೊಂಡಿದ್ದು ಸಾಮಾನ್ಯ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲು ನಮ್ಮ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿಎಂಆರ್‌ಸಿಎಲ್‌ (BMRCL) ತಿಳಿಸಿದೆ.  ಇದನ್ನೂ ಓದಿ:  ಪ್ರೀತಿಸಿ ಮದುವೆಯಾದ ಎಂಟೇ ತಿಂಗಳಿಗೆ ಪತ್ನಿಯನ್ನು ಥಳಿಸಿ ಕೊಂದ ಪತಿ – ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಒಂದು ರೈಲಿನ ಸಂಚಾರ ಸ್ಥಗಿತಗೊಂಡಿದ್ದರಿಂದ ಈ ಮಾರ್ಗದಲ್ಲಿ 15 ನಿಮಿಷದ ಬದಲಾಗಿದೆ 19 ನಿಮಿಷದ ಅಂತರದಲ್ಲಿ ರೈಲುಗಳು ಈಗ ಸಂಚರಿಸುತ್ತಿವೆ. ದುರಸ್ಥಿ ಮಾಡಿದ ಬಳಿಕ ಎಂದಿನಂತೆ 15 ನಿಮಿಷದಲ್ಲಿ ರೈಲು ಸಂಚಾರ ಮಾಡಲಿದೆ.

Share This Article