ಬೆಂಗಳೂರು: ಹೊಸದಾಗಿ ಆರಂಭಗೊಂಡಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಮೆಟ್ರೋದಲ್ಲಿ (Yellow Line Metro) ತಾಂತ್ರಿಕ ಸಮಸ್ಯೆ ಎದುರಾಗಿದೆ.
ತಾಂತ್ರಿಕ ಸಮಸ್ಯೆಯಿಂದ (Techinical Problem) ಪ್ರತಿ 25 ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚಾರ ನಡೆಸುತ್ತಿವೆ. ಸಾರ್ವಜನಿಕರು ಸಹಕರಿಸಬೇಕೆಂದು ಬಿಎಂಆರ್‌ಸಿಎಲ್ (BMRCL) ಮನವಿ ಮಾಡಿದೆ. ಇದನ್ನೂ ಓದಿ: ಸೈಬರ್ ಕ್ರೈಮ್ ಹಬ್ ಆಗ್ತಿದ್ಯಾ ಬೆಂಗಳೂರು? – ಮೆಟ್ರೋ ನಗರಗಳ ಪೈಕಿ 50% ಕೇಸ್ ಸಿಲಿಕಾನ್ ಸಿಟಿಯದ್ದೇ!
ಹಳದಿ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ
ಇಂದು ಒಂದು ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣದಿಂದ10:15ಗಂಟೆಯಿಂದ ಹಳದಿ ಮಾರ್ಗದ ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ಪ್ರಯಾಣಿಕರು ಈ ಕುರಿತು ಗಮನಿಸಿ ಇದರಿಂದ ಆದ ಅನಾನುಕೂಲತೆಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ.
ಸಹಿ/-
ಸಾರ್ವಜನಿಕ ಸಂಪರ್ಕಧಿಕಾರಿ
ಬೆ.ಮೇ.ರೈ.ನಿ.ನಿ— ನಮ್ಮ ಮೆಟ್ರೋ (@OfficialBMRCL) October 12, 2025
ಆರ್‌ವಿ ಕಾಲೇಜ್ ರಸ್ತೆಯಿಂದ (RV College Road) ಬೊಮ್ಮಸಂದ್ರದವರೆಗೆ ಸಾಗುವ ಹಳದಿ ಮಾರ್ಗದ ಮೆಟ್ರೋ ಸೇವೆಗೆ ಇದೇ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
19.15 ಕಿ.ಮೀ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು 3 ಮೆಟ್ರೋ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಒಟ್ಟು ನಾಲ್ಕು ರೈಲುಗಳು ಈಗ ಸಂಚಾರ ನಡೆಸುತ್ತಿದ್ದು ಶೀಘ್ರವೇ 5ನೇ ರೈಲು ಸೇರ್ಪಡೆಯಾಗುವ ಸಾಧ್ಯತೆಯಿದೆ.