ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಯಾಣಿಕರ ಪರದಾಟ, ಆಕ್ರೋಶ- ಸಮಸ್ಯೆ ಸರಿಪಡಿಸಿದ BMRCL  

Public TV
1 Min Read

ಬೆಂಗಳೂರು: ನಮ್ಮ ಮೆಟ್ರೋ ನೆರಳೆ ಹಾಗೂ ಹಸಿರು ಮಾರ್ಗದಲ್ಲಿ (Namma Metro Purple Line) ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಕೆಲಸಕ್ಕೆ ತೆರಳುವ ಪ್ರಯಾಣಿಕರು ಕೆಲಕಾಲ ಪರದಾಟ ಅನುಭವಿಸಿದ್ದಾರೆ.

ಗರುಡಚಾರ್ ಪಾಳ್ಯ, ಬೈಯಪ್ಪನಹಳ್ಳಿ ಮಾರ್ಗ ಮಧ್ಯೆ ಸಮಸ್ಯೆ ಎದುರಾಗಿದೆ. ಸಿಗ್ನಲಿಂಗ್ ಸಮಸ್ಯೆಯಿಂದ ಮೆಟ್ರೋ ಓಡಾಟ ವಿಳಂಬವಾಗುತ್ತಿದ್ದು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಮೆಟ್ರೋ ನಿಲ್ದಾಣದೊಳಗೆ ಪ್ರಯಾಣಿಕರು ಭದ್ರತಾ ವಿಭಾಗದ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು. ಇತ್ತ ಗ್ರೀನ್‌ ಲೈನ್‌ನಲ್ಲಿಯೂ ಈ ಸಮಸ್ಯೆ ಎದುರಾಗಿದೆ. ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಮೆಟ್ರೋ ಸಿಗದೆ ಜನ ಪರದಾಡಿದ್ದಾರೆ.

ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿ To ಗರುಡಾಚಾರ್ಪಾಳ್ಯ ನಡುವೆ ನಿಧಾನಗತಿಯಲ್ಲಿ ಮೆಟ್ರೋ ರೈಲುಗಳು ಓಡಾಟ ನಡೆಸುತ್ತವೆ. ಪ್ರತಿ ಅರ್ಧಗಂಟೆಗೊಮ್ಮೆ ಮೆಟ್ರೋ ಓಡಾಟ ನಡೆಸುತ್ತಿದ್ದು, ಇದರಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ: ಖರ್ಗೆ ಭವಿಷ್ಯ

ಪ್ರವೇಶದ್ವಾರ ಬಂದ್: ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಎಂಟ್ರಿ ಡೋರ್ ಕ್ಲೋಸ್ ಮಾಡಲಾಗಿದೆ. ಒಳಗಿಂದ ಬರುವ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಎಂಟ್ರೆನ್ಸ್ ಬಳಿ ಪ್ರಯಾಣಿಕರು ಕಾದು ಕುಳಿತಿದ್ದಾರೆ. ಕ್ರೌಡ್ ಕ್ಲಿಯರ್ ಮಾಡಿದ ಬಳಿಕ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.‌ ಇತ್ತ ಕೆಲವು ಪ್ರಯಾಣಿಕರು ಆಟೋ, ಕ್ಯಾಬ್‌ ಬುಕ್‌ ಮಾಡಿಕೊಂಡು ತೆರಳುತ್ತಿದ್ದಾರೆ.

ಸಮಸ್ಯೆ ಸರಿಪಡಿಸಿದ BMRCL: ನಮ್ಮ ಮೆಟ್ರೋದಲ್ಲಿ ತಾಂತ್ರಿಕ ದೋ಼ ಕಂಡುಬರುತ್ತಿದ್ದಂತೆಯೇ ಎಚ್ಚೆತ್ತ BMRCL ಅಧಿಕಾರಿಗಳು 10 ಗಂಟೆ ಸುಮಾರಿಗೆ ಸಮಸ್ಯೆ ಸರಿಪಡಿಸಿದ್ದಾರೆ. ಬೆಳಗ್ಗೆಯಿಂದ ಮ್ಯಾನುವಲ್ ಮೋಡ್ ನಲ್ಲಿ ( ನಿಧಾನಕ್ಕೆ ) ಮೆಟ್ರೋ ರನ್ ಮಾಡ್ತಿದ್ರು. ಹೀಗಾಗಿ ಸಹಜವಾಗಿ ಮೆಟ್ರೋ ರೈಲು ಪ್ರತಿ 5, 10 ನಿಮಿಷಕ್ಕೆ ಓಡಾಡ್ತಿತ್ತು.

Share This Article