ಕೊರಿಯರ್‌ ಕೊಡುವ ನೆಪದಲ್ಲಿ ಬಂದು ಟೆಕ್ಕಿ ಮೇಲೆ ಅತ್ಯಾಚಾರ – ಮುಖಕ್ಕೆ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ಕುಕೃತ್ಯ

Public TV
1 Min Read

ಮುಂಬೈ: ಕೊರಿಯರ್‌ ಕೊಡುವ ನೆಪದಲ್ಲಿ ಬಂದು ಮಹಿಳಾ ಟೆಕ್ಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪುಣೆಯ (Pune) ಕೊಂಢವಾದಲ್ಲಿ ನಡೆದಿದೆ.

ಕೊಂಢವಾ ವಸತಿ ಸೊಸೈಟಿಯ ಮನೆಯಲ್ಲಿ ಒಂಟಿಯಾಗಿದ್ದ 22 ವರ್ಷದ ಟೆಕ್ಕಿ ಮೇಲೆ ಕೊರಿಯರ್‌ ಕೊಡುವ ನೆಪದಲ್ಲಿ ಬಂದಾತ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಟ್ರ್ಯಾಕ್ಟರ್‌  ಡಿಕ್ಕಿ – ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಸಾವು

ಘಟನೆ ರಾತ್ರಿ 7:30 ರ ಸುಮಾರಿಗೆ ನಡೆದಿದೆ. ಟೆಕ್ಕಿ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿದ್ದಳು. ಆಕೆಯ ಸಹೋದರ ಹೊರಗೆ ಹೋಗಿದ್ದ. ಆರೋಪಿಯು ಕೊರಿಯರ್‌ ನೆಪದಲ್ಲಿ ಆಕೆಯ ಅಪಾರ್ಟ್‌ಮೆಂಟ್‌ಗೆ ಬಂದಿದ್ದ. ನಾನು ಏನನ್ನೂ ಬುಕ್‌ ಮಾಡಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ. ಆದರೂ, ನಿಮ್ಮ ಸಹಿ ಬೇಕಿದೆ ಎಂದು ಆತ ಕೇಳಿದ್ದಾನೆ.

ಸಹಿ ಹಾಕಲು ಆಕೆ ಬಾಗಿಲು ತೆರೆದಾಗ, ಆರೋಪಿಯು ಅವಳ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ಫ್ಲಾಟ್‌ಗೆ ನುಗ್ಗಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತೆ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಳು. ಕುಕೃತ್ಯದ ಬಳಿಕ ಆರೋಪಿಯು, ‘ಈ ಬಗ್ಗೆ ಯಾರಿಗೂ ಹೇಳಬೇಡ. ಮತ್ತೆ ಬರುವೆ’ ಮೊಬೈಲ್‌ನಲ್ಲಿ ಸಂದೇಶ ಬಿಟ್ಟು ಹೋಗಿದ್ದಾನೆ. ಅಲ್ಲದೇ, ಸಂತ್ರಸ್ತೆಯೊಂದಿಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾನೆ. ಇದನ್ನೂ ಓದಿ: ಎಂಎಲ್‌ಸಿ ರವಿಕುಮಾರ್ ಮೇಲೆ ನಿಯಮಾವಳಿಗಳ ಪ್ರಕಾರ ಕ್ರಮ – ಹೊರಟ್ಟಿ

ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಸರಾಂತ ಸಂಸ್ಥೆಯಲ್ಲಿ ಐಟಿ ವೃತ್ತಿಪರರಾಗಿರುವ ಆ ಮಹಿಳೆ ಮೂಲತಃ ಅಕೋಲಾದವರು. ಅವರು ನಗರದ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ತಮ್ಮ ಕಿರಿಯ ಸಹೋದರನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ ಪ್ರದೇಶ) ಮನೋಜ್ ಪಾಟೀಲ್ ತಿಳಿಸಿದ್ದಾರೆ.

Share This Article