ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಬಿದ್ದು ಟೆಕ್ಕಿ ದುರ್ಮರಣ

Public TV
1 Min Read

ಬೆಂಗಳೂರು: 27 ವರ್ಷದ ಟೆಕ್ಕಿಯೊಬ್ಬ ಬಾಲ್ಕನಿಯಿಂದ (Apartment Balcony) ಬಿದ್ದು ಮೃತಪಟ್ಟ ದಾರುಣ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಮೃತನನ್ನು ದಿಪಾಂಶು ಶರ್ಮಾ ಎಂದು ಗುರುತಿಸಲಾಗಿದೆ. ಈ ಘಟನೆ ಶುಕ್ರವಾರ ಬೆಳಗ್ಗೆ 6.45ರ ಸುಮಾರಿಗೆ ಬೆಂಗಳೂರಿನ ಕೆಆರ್ ಪುರ (KR Pura) ಬಳಿಯ ಕೊಡಿಗೇಹಳ್ಳಿಯಲ್ಲಿ ನಡೆದಿದೆ.

ದಿಪಾಂಶು ಶರ್ಮಾ ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುತ್ತಿದ್ದ. ಇದೇ ಸಂದರ್ಭಲ್ಲಿ ಸಿಗರೇಟ್ ಸೇದಲೆಂದು ಟೆಕ್ಕಿ (Techie) ಬಾಲ್ಕನಿಗೆ ತೆರಳಿದ್ದನು. ಈ ವೇಳೆ ಆಯತಪ್ಪಿ ಅಪಾರ್ಟ್‍ಮೆಂಟ್‍ನ 33ನೇ ಫ್ಲೋರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಇದನ್ನೂ ಓದಿ: 5 ಅಸ್ಥಿಪಂಜರ ಪತ್ತೆ ಪ್ರಕರಣ- ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ತೆರಳಿದ ಅಕ್ಕಪಕ್ಕದ ನಿವಾಸಿಗಳು

ಘಟನೆ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article